ಡಿಕೆಶಿ ಗಂಡಸಲ್ಲ.. ಗಾಂ….- ರಮೇಶ ಜಾರಕಿಹೊಳಿ…!
1 min readಬೆಂಗಳೂರು: ಮಹಾನಾಯಕ ಯಾರು ಎಂಬುದು ಎಲ್ಲರಿಗೂ ಗೊತ್ತಾಗಿದೆ. ನರೇಶ ಯಾರು ಎಂದು ಒಪ್ಪಿಕೊಂಡಿದ್ದಾನೆ. ಆ ಮಹಾನಾಯಕ ರಾಜಕಾರಣಕ್ಕೆ ನಾಲಾಯಕ್. ಆತ ಗಂಡಸೇ ಅಲ್ಲಾ, ಗಾಂ… ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಗುಡುಗಿದ್ದಾರೆ.
ಸಿಡಿ ವಿಷಯವಾಗಿ ಎದ್ದಿರುವ ಗೊಂದಲದ ಬಗ್ಗೆ ಇಂದು ಸಂಜೆಯವರೆಗೆ ಬಾಂಬ್ ಸಿಡಿಸುವುದಾಗಿ ಹೇಳಿದ್ದರು. ಇದೇ ಕಾರಣಕ್ಕೆ ಈಗ ಕೆಲವೇ ನಿಮಿಷಗಳ ಹಿಂದೆ ಮಾತನಾಡಿದ ರಮೇಶ ಜಾರಕಿಹೊಳಿ, ನಮ್ಮ ಕುಟುಂಬ ಯಾರಿಗೂ ಮೋಸ ಮಾಡಿಲ್ಲ. ರಾಜಕಾರಣದಲ್ಲಿ ಇದೊಂದು ದೊಡ್ಡ ಷಡ್ಯಂತ್ರವಿದೆ ಎಂದರು.
ಕನಕಪುರ ಚುನಾವಣೆಯಲ್ಲಿ ನಾನು ಡಿಕೆಶಿ ವಿರುದ್ಧ ಚುನಾವಣೆಗೆ ನಿಲ್ಲುತ್ತೇನೆ. ಗೋಕಾಕದಲ್ಲಿ ನನ್ನ ತಮ್ಮನನ್ನ ನಿಲ್ಲಿಸುತ್ತೇನೆ. ನನ್ನ ಬಳಿ 11 ದಾಖಲೆಗಳಿವೆ. ಅವುಗಳನ್ನೇಲ್ಲ ಎಸ್ಐಟಿಗೆ ಕೊಡುತ್ತೇನೆ. ಆತ ಕ್ರಿಮಿನಲ್ ಇದ್ದಾನೆಂದು ಡಿಕೆಶಿ ವಿರುದ್ಧ ಗುಡುಗಿದರು.
ಡಿಕೆಶಿ ಒಬ್ಬ ಗಾಂ.. ಆತ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು. ಆತನ ಮೇಲೆ ಅಟ್ರಾಸಿಟಿ ಕೇಸ್ ಹಾಕಿ ಒಳಗೆ ಹಾಕಬೇಕು ಎಂದು ಹೇಳಿದರು.