ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ: ಆರು ತಿಂಗಳ ಸಮಯಾವಕಾಶ ಪಡೆದ ಸರಕಾರ….
1 min readಬೆಂಗಳೂರು: ಇಂದಿನಿಂದ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಹೇಳಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ಹೋರಾಟದಿಂದ ಹಿಂದೆ ಸರಿದಿದ್ದು, ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡಿದ ಭರವಸೆ ಕಾರಣವಾಗಿದೆ.
ವಿಧಾನಸಭೆಯಲ್ಲಿ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಿ.ಎಸ್.ಯೂಡಿಯೂರಪ್ಪನವರು, ಪಂಚಮಸಾಲಿ ಸಮುದಾಯವನ್ನ 2ಎ ಗೆ ಸೇರಿಸುವ ಬಗ್ಗೆ ಹಿಂದುಳಿದ ಆಯೋಗ ಮತ್ತು ನಿವೃತ್ತ ನ್ಯಾಯಾಧೀಶರ ವರದಿ ಬಂದ ನಂತರ ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸಲಾಗುವುದೆಂದು ಹೇಳಿದರು.
ಸಿಎಂ ಯಡಿಯೂರಪ್ಪನವರ ಉತ್ತರಕ್ಕೆ ಪ್ರತಿಯಾಗಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲಯತ್ನಾಳ ಮಾತನಾಡಿ, ಮುಖ್ಯಮಂತ್ರಿಗಳು ಆರು ತಿಂಗಳೊಳಗೆ ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಬೇಕೆಂದು ಹೇಳಿದರು. ಅಲ್ಲಿಯವರೆಗೆ ಹೋರಾಟವನ್ನ ಕೈಬಿಡುವಂತೆ ಶ್ರೀಗಳಿಗೆ ಹೇಳಲಾಗುವುದೆಂದು ತಿಳಿಸಿದರು.
ಪ್ರೀಡಂ ಪಾರ್ಕಿನಲ್ಲಿ ಕೂಡಲಸಂಗಮದ ಸ್ವಾಮೀಜಿಗಳು ನಡೆಸುತ್ತಿರುವ ಹೋರಾಟವನ್ನ ಆರು ತಿಂಗಳವರೆಗೆ ಸ್ಥಗಿತಗೊಳಿಸಿ, ಮುಂದಿನ ದಿನಗಳಲ್ಲಿ ಮತ್ತೆ ನಿರ್ಧಾರ ಮಾಡೋಣವೆಂದು ಸ್ವಾಮೀಜಿಗಳಿಗೆ ತಿಳಸಲಾಗುವುದೆಂದು ಯತ್ನಾಳ ಸಭೆಯಲ್ಲಿ ಹೇಳಿದರು.