ಸರಕಾರಿ ಮಹಿಳಾ ಉದ್ಯೋಗಿಗಳಿಗೆ ಪ್ರಸೂತಿ ರಜೆ ಇನ್ನೂ ಮುಂದೆ ಆರು ತಿಂಗಳು…

ಬೆಂಗಳೂರು: ಸರ್ಕಾರಿ ಉದ್ಯೋಗಿಗಳಿಗೆ ಪ್ರಸೂತಿ ರಜೆಯೊಂದಿಗೆ ಮಕ್ಕಳ ಪೋಷಣೆಗೆ 6 ತಿಂಗಳ ಹೆಚ್ಚುವರಿ ರಜೆ ಘೋಷಣೆಯನ್ನ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದರು.

ಸರಕಾರಿ ಮಹಿಳಾ ನೌಕರರು ಈ ಹಿಂದೆ ಮೂರು ತಿಂಗಳು ವೇತನ ಸಹಿತ ರಜೆಯನ್ನ ಪಡೆಯುತ್ತಿದ್ದರು. ಇನ್ನೂ ಮುಂದೆ ಮಕ್ಕಳ ಪೋಷಣೆಗೂ ಅನುಕೂಲವಾಗುವ ರೀತಿಯಲ್ಲಿ ಅದನ್ನ ಆರು ತಿಂಗಳಿಗೆ ಹೆಚ್ಚಿಸಲಾಗಿದೆ.
ಇಂದು ನಡೆಯುತ್ತಿರುವ ಬಜೆಟ್ ಮಂಡನೆಯಲ್ಲಿ ಈ ವಿಷಯವನ್ನ ಪ್ರಸ್ತಾಪಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ನೌಕರರಿಗೆ ಉತ್ತಮ ಯೋಜನೆಯನ್ನ ಘೋಷಿಸಿದಂತಾಗಿದೆ.
ಇದರ ಜೊತೆಗೆ ಸರಕಾರಿ ಶಾಲೆಗಳ ಶೌಚಾಲಯ ನಿರ್ಮಾಣಕ್ಕೆ 100 ಕೋಟಿ ರೂಪಾಯಿ ನೀಡುವುದಾಗಿಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಘೋಷಣೆ ಮಾಡಿದ್ದಾರೆ.