Posts Slider

Karnataka Voice

Latest Kannada News

ಅಂಚಟಗೇರಿ ಬಳಿ ಪೊಲೀಸ್ ಗೆ ಬೈಕ್ ಡಿಕ್ಕಿ: ತಪಾಸಣೆ ವೇಳೆಯಲ್ಲಿ ಘಟನೆ..

1 min read
Spread the love

ಹುಬ್ಬಳ್ಳಿ: ತಾಲೂಕಿನ ಅಂಚಟಗೇರಿ ಬಳಿಯಲ್ಲಿ ವಾಹನಗಳನ್ನ ತಪಾಸಣೆ ಮಾಡುವ ವೇಳೆಯಲ್ಲಿ ಬೈಕೊಂದು ಪೊಲೀಸ್ ಗೆ ಡಿಕ್ಕಿ ಹೊಡೆದ ಪರಿಣಾಮ, ಪೊಲೀಸ್ ಹಾಗೂ ಬೈಕ್ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸಟೇಬಲ್ ಜಗದೀಶ ಬೆಳಗಾವಿ ಎಂಬುವವರೇ ಘಟನೆಯಲ್ಲಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ದಾಖಲಾಗಿದ್ದಾರೆ.

ಇಂದು ಬೆಳಿಗ್ಗೆ ಮೊದಲ ಬಾರಿಗೆ ಗ್ರಾಮೀಣ ಠಾಣೆಯ ಸಿಬ್ಬಂದಿಗಳು ಬಿಳಿ ಬಟ್ಟೆಯನ್ನ ಹಾಕಿಕೊಂಡು ಕರ್ತವ್ಯ  ನಿರ್ವಹಣೆ ಮಾಡುತ್ತಿದ್ದರು. ಈ ಸಮಯದಲ್ಲಿ ವೇಗವಾಗಿ ಬಂದ ಬೈಕ್ ಸವಾರನನ್ನ ತಡೆಯಲು ಹೋದಾಗ ಘಟನೆ ನಡೆದಿದೆ.

ವೇಗವಾಗಿ ಬಂದ ಬೈಕ್ ಸವಾರನಿಗೂ ಕಿಮ್ಸಗೆ ದಾಖಲು ಮಾಡಲಾಗಿದ್ದು, ಸವಾರನ ಬಗ್ಗೆ ಮಾಹಿತಿಯನ್ನ ಪೊಲೀಸರು ಕಲೆ ಹಾಕುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *