ಅವಳಿನಗರದ ಬಸ್ ಗಳಲ್ಲಿ ಕಿಸೆ ಕತ್ತರಿಸೋ ಐವರು ಮಹಿಳೆಯರ ಬಂಧನ…!
1 min readಹುಬ್ಬಳ್ಳಿ: ಅವಳಿನಗರದಲ್ಲಿ ಕಿಸೆಗಳ್ಳತನ ಮತ್ತು ಬ್ಯಾಗುಗಳನ್ನ ಬಸ್ಸಗಳಲ್ಲಿ ಕಳ್ಳತನ ಮಾಡುತ್ತಿದ್ದ ಐವರು ಮಹಿಳೆಯರನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರೆಲ್ಲರೂ ಹುಬ್ಬಳ್ಳಿಯವರೇ ಆಗಿದ್ದು, ಸುಮಾರು 27 ರಿಂದ 35 ವಯಸ್ಸಿನವರಾಗಿದ್ದಾರೆ. ಪ್ರಯಾಣಿಕರಂತೆ ನಟಿಸಿ ಬಸ್ ಹತ್ತಿದ ನಂತರ ಕಿಸೆಗಳ್ಳತನ ಮತ್ತು ಬ್ಯಾಗ್ ನ್ನ ಎಗರಿಸಿ ಕಣ್ಮರೆಯಾಗುತ್ತಿದ್ದರು. ಬಹುತೇಕರಿಗೆ ಕಳ್ಳ ಗಂಡಸಾಗಿರುತ್ತಾನೆಂಬ ಕಲ್ಪನೆ ಇರುವುದರಿಂದ, ಈ ಮಹಿಳೆಯರು ತಮ್ಮ ಕೆಲಸ ಮುಗಿಸಿ ಹೋಗಿರುತ್ತಿದ್ದರು.
ಬಂಧಿತರನ್ನ ಪಲ್ಲವಿ ಚಂದ್ರಶೇಖರ ಭಜಂತ್ರಿ, ಆಸ್ಮಾ ಮಹ್ಮದರಫೀಕ ಗದಗ, ಕೊಳದವ್ವ ಅಲಿಯಾಸ್ ಕೊಳಲಿ ಆಂಜನೇಯ ತವರಗೊಪ್ಪ, ಯಲ್ಲಮ್ಮ ಬಸವರಾಜ ಕೊಟುಗಣಸಿ ಹಾಗೂ ಪ್ರೇಮಾ ಅಲಿಯಾಸ್ ಪಾರಿಜಾತ ಅಣ್ಣಪ್ಪ ಭಜಂತ್ರಿ ಎಂದು ಗುರುತಿಸಲಾಗಿದೆ.
ಬಂಧಿತ ಮಹಿಳೆಯರಿಂದ 20 ಗ್ರಾಂ ತೂಕದ ಚಿನ್ನದ ಗಲಸಿರಿ, 1ಗ್ರಾಂ ತೂಕದ 16 ಚಿನ್ನದ ಗುಂಡುಗಳು ಹಾಗೂ 1860 ರೂಪಾಯಿ ನಗದನ್ನ ವಶಕ್ಕೆ ಪಡೆಯಲಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಹರ ಠಾಣೆ ಇನ್ಸಪೆಕ್ಟರ್ ಆನಂದ ಒನಕುದ್ರೆ, ಮಹಿಳಾ ಪಿಎಸ್ಐ ಪದ್ಮಮ್ಮ ಹಾಗೂ ಸಿಬ್ಬಂದಿಗಳು ಮಹಿಳಾ ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.