ಪಿಐ ಮಹಾಂತೇಶ ಹೊಸಪೇಟೆಯವರೇ, ನೀವು ಬೈಕ್ ಎಷ್ಟು ವಶಕ್ಕೆ ಪಡೆಯುತ್ತೀರಿ… ಎಷ್ಟಕ್ಕೆ ದಂಡ ಹಾಕ್ತೀರಿ…!

ಹುಬ್ಬಳ್ಳಿ: ನಗರದ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿನವೊಂದಕ್ಕೆ ನೋ ಪಾರ್ಕಿಂಗ್ ಜಾಗದಲ್ಲಿರುವ ಬೈಕುಗಳನ್ನ ವಶಕ್ಕೆ ಪಡೆಯುವುದಕ್ಕೂ, ಲೆಕ್ಕ ತೋರಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿರುವುದು ಕಂಡು ಬರುತ್ತಿದೆ. ಕಳೆದ ಮೂರು ದಿನದಿಂದ ಕರ್ನಾಟಕವಾಯ್ಸ್.ಕಾಂ ಬೆನ್ನು ಹತ್ತಿದ ಮಾಹಿತಿಯನ್ನ ನೀವೂ ಸಂಪೂರ್ಣವಾಗಿ ನೋಡಿ, ಏನು ನಡೆಯುತ್ತಿದೆ ಎಂಬುದನ್ನ ತಿಳಿದುಕೊಳ್ಳಿ..
ಪ್ರತಿ ದಿನವೂ ಟೋಯಿಂಗ್ ವೆಹಿಕಲ್ ಹೊರಗೆ ಬಿತ್ತು ಎಂದರೇ, ಸುಮಾರು 8 ಬೈಕುಗಳನ್ನ ತೆಗೆದುಕೊಂಡು ಹೋಗಲಾಗುತ್ತದೆ. ಹಾಗೇ ದಿನವೊಂದಕ್ಕೆ ಏಳರಿಂದ 8 ಸಲ ಬೈಕುಗಳನ್ನ ತೆಗೆದುಕೊಂಡು ಠಾಣೆಗೆ ಹೋಗಲಾಗುತ್ತದೆ. ಅಂದರೇ, ಬರೋಬ್ಬರಿ 50 ರಿಂದ 60 ಬೈಕುಗಳನ್ನ ವಶಕ್ಕೆ ಪಡೆದು, ಕಾನೂನು ಕ್ರಮದ ಭಯವನ್ನ ಹುಟ್ಟಿಸಲಾಗತ್ತೆ.
ಆದರೆ, ಠಾಣೆಗಳಿಗೆ ಬೈಕುಗಳು ತಲುಪಿದ ಮೇಲೆ ನಡೆಯೋದು ಬೇರೆಯದ್ದೇ ಕಾನೂನಿನಾಟ. ಅಲ್ಲಿ ಹಿಡಿಯೋರು, ಬಿಡಿಸಿಕೊಳ್ಳೋದ್ದು ಮತ್ತೊಂದು ಮಜಲಿನಾಟ. ಆಡೂನ್ ಬಾ… ನಿಲ್ಲೂನ್ ಬಾ.. ಅನ್ನೋರದ್ದು ಒಂದು ತಂಡ. ಸಂಜೆಯವರೆಗೆ ನಡೆಯೋದು ಇದೇ ಆಟ.

ಸಂಜೆಯಾಗುತ್ತಿದ್ದ ಹಾಗೇ ಬೈಕುಗಳ ವಿಲೇವಾರಿ ಮಾಡಬೇಕು. ರಾತ್ರಿಯಾಗುವುದರೊಳಗೆ ಕಮೀಷನರ್ ಕಚೇರಿಗೆ ಲೆಕ್ಕ ಹೋಗಬೇಕು. ಆಗ, ವಶಕ್ಕೆ ಪಡೆದ ಅಷ್ಟು ಬೈಕುಗಳ ಪೈಕಿ, ದಿನವೊಂದಕ್ಕೆ ನಾಲ್ಕರಿಂದ 9 ಬೈಕುಗಳ ಲೆಕ್ಕಾಚಾರ ಕಮೀಷನರ್ ಕಚೇರಿಗೆ ತಲುಪುತ್ತೆ. ಹಾಗಾದರೇ, ಉಳಿದ ಬೈಕುಗಳ ಲೆಕ್ಕವೆಲ್ಲಿ ಎಂಬುದನ್ನ ಸಂಚಾರಿ ಎಸಿಪಿ, ಸಂಚಾರಿ ಮತ್ತು ಅಪರಾಧ ವಿಭಾಗದ ಡಿಸಿಪಿಯವರು ಇನ್ಸಪೆಕ್ಟರ್ ಮಹಾಂತೇಶ ಹೊಸಪೇಟೆಯವರನ್ನ ಕೇಳಬೇಕಿದೆ.
ಕೆಲವರು ಮೆಡಿಕಲ್ ಮುಂದೆ ನಿಲ್ಲಿಸಿದಾಗಲೂ ಟೋಯಿಂಗ್ ವಾಹನದಲ್ಲಿ ತೆಗೆದುಕೊಂಡು ಹೋಗಿ ದಂಡ ವಸೂಲಿ ಮಾಡಲಾಗುತ್ತೆ. ಹಾಗಾದರೇ, ಆ ಲೆಕ್ಕ ಎಲ್ಲಿ ಹೋಗತ್ತೆ. ಕಳೆದ ಮೂರು ದಿನಗಳ ವೀಡಿಯೋ ಕರ್ನಾಟಕವಾಯ್ಸ್.ಕಾಂ ಬಳಿಯಲ್ಲಿವೆ. ಎಷ್ಟು ಬೈಕುಗಳನ್ನ ವಶಕ್ಕೆ ಪಡೆಯಲಾಗಿದೆ ಎಂಬುದು ಸಂಪೂರ್ಣವಾಗಿ ಮಾಹಿತಿಯಿದೆ.
ಇನ್ಸಪೆಕ್ಟರ್ ಮಹಾಂತೇಶ ಹೊಸಪೇಟೆಯವರೇ ಉತ್ತರ ಕೊಡ್ತೀರಾ.. ಯಾಕ್ಹೀಗೆ ಅಂತಾ…!