Posts Slider

Karnataka Voice

Latest Kannada News

ಧಾರವಾಡ ಲೈನ್ ಬಜಾರ ಹನಮಪ್ಪನ ಗುಡಿ ಹತ್ತಿರ ಶವ…!

1 min read
Spread the love

ಧಾರವಾಡ: ನಗರದ ಲೈನ್ ಬಜಾರ ಹನಮಂತ ದೇವರ ದೇವಸ್ಥಾನದ ಬಳಿ ವ್ಯಕ್ತಿಯೋರ್ವನ ಶವ ಸಿಕ್ಕಿದ್ದು, ಮೂಗಿನಲ್ಲಿ ರಕ್ತಸ್ರಾವವಾಗಿದ್ದು ಯಾವ ಕಾರಣಕ್ಕೆ ಸಾವಿಗೀಡಾಗಿದ್ದಾನೆಂದು ತಿಳಿದು ಬಂದಿಲ್ಲ.

ಅಂದಾಜು ಮೂವತ್ತರಿಂದ ಮೂವತೈದು ವಯಸ್ಸಿನ ವ್ಯಕ್ತಿಯ ಶವ ದೊರಕಿದ್ದು, ಯಾವ ಕಾರಣದಿಂದ ತೀರಿಕೊಂಡಿದ್ದಾನೆಂದು ಗೊತ್ತಾಗುತ್ತಿಲ್ಲ. ನೀಲಿ ಬಣ್ಣದ ಅಂಗಿಯನ್ನ ಹಾಕಿಕೊಂಡಿದ್ದು, ಯಾವುದೋ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಯಿರಬಹುದೆಂದು ಶಂಕಿಸಲಾಗಿದೆ.

ಬೆಳಿಗ್ಗೆ ದಾರಿ ಹೋಕರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಧಾರವಾಡ ಶಹರ ಠಾಣೆಯ ಪೊಲೀಸರು ಸ್ಥಳಕ್ಕೆ ಹೋಗಿ, ಪರಿಶೀಲನೆ ನಡೆಸಿದ್ದು, ಶವವನ್ನ ಸಿವಿಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.

ಚಿತ್ರದಲ್ಲಿರುವ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿಯಿದ್ದರೇ ತಕ್ಷಣವೇ ಶಹರ ಠಾಣೆಯ ಪೊಲೀಸರಿಗೆ ಮಾಹಿತಿಯನ್ನ ನೀಡುವಂತೆ ಕೋರಲಾಗಿದೆ.


Spread the love

Leave a Reply

Your email address will not be published. Required fields are marked *