ಧಾರವಾಡದಲ್ಲಿ ಸಂಕಲ್ಪ ಶೆಟ್ಟರ ಬಂದು ಮಾಡಿದ್ದೇನು….!?

ಧಾರವಾಡ: ಭಾರತೀಯ ಜನತಾ ಪಕ್ಷದ 71ಯುವಮೋರ್ಚಾ ಘಟಕದ ವತಿಯಿಂದ ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ನಿಮಿತ್ತ ಇಂದು ಬೆಳಿಗ್ಗೆ ಧಾರವಾಡದ ಪ್ರಸಿದ್ಧ ಛತ್ರಪತಿ ಶಿವಾಜಿ ವೃತ್ತವನ್ನು ಯುವಮೋರ್ಚಾ ಅಧ್ಯಕ್ಷ ಶಕ್ತಿ ಹಿರೇಮಠ ನೇತೃತ್ವದಲ್ಲಿ ಸ್ವಚ್ಚಗೊಳಿಸಲಾಯಿತು.
ವಿಶೇಷ ಅತಿಥಿಗಳಾಗಿ ಸಚಿವ ಜಗದೀಶ ಶೆಟ್ಟರ ಪುತ್ರ ಸಂಕಲ್ಪ ಶೆಟ್ಟರ್ ಸ್ವಚ್ಚಭಾರತ ಅಭಿಯಾನದಲ್ಲಿ ಭಾಗವಹಿಸಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ 71ರ ಮಂಡಳ ಅಧ್ಯಕ್ಷ ಸುನೀಲ ಮೋರೆ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಕಿರಣ ಉಪ್ಪಾರ್, ಮಂಡಳ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಕೋಟ್ಯಾನ್, ಹರೀಶ ಬಿಜಾಪುರ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಶಂಕರ ಶೇಳಕೆ, ಜಿಲ್ಲಾ ಕಾರ್ಯದರ್ಶಿ ಸಿದ್ಧು ಕಲ್ಯಾಣ ಶೆಟ್ಟಿ, ಮಂಜುನಾಥ ಭೋಸಲೆ ಮಂಡಳ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನಾಯಕ ಗೊಂಧಳಿ, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಮಂಜುನಾಥ ಯರಗಟ್ಟಿ, ಸ್ವಚ್ಚ ಭಾರತ ಜಿಲ್ಲಾ ಸಂಚಾಲಕ ವಿನೋದ್, ಸಹ ಸಂಚಾಲಕ ಪ್ರಕಾಶ ಇಂಗಳೆ, ಪಕ್ಷದ ಹಿರಿಯರಾದ ನಿಂಗಪ್ಪ ಸಪೂರಿ, ರವಿ ಯೆಂಡಿಗೆರಿ, ಮಂಜುನಾಥ ಮಾಳೆ ರಾಹುಲ್ ಅಷ್ಟಗಿ ಯುವಮೋರ್ಚಾ ಪ್ರಮುಖ ಪದಾಧಿಕಾರಿಗಳಾದ ರಾಘವೇಂದ್ರ ತುಪ್ಪದ, ಕಾರ್ತಿಕ ಪೂಜಾರ್, ಸಚಿನ ಚವಾಣ್, ಸೂರಂಜನ್ ಗೂಂಡೆ, ಶ್ರೀಕಾಂತ ಒಂಟಿ ಸಾಗರ್ ಜೋಶಿ, ರಾಜೇಶ್ ನಾಯ್ಕ್ , ರವಿ ಮಾಳಗಾರ್, ಗುರು ತಳವಾರ ರೋಹಿತ ಜಾಧವ ಕಾರ್ತಿಕ ಹೆಂಬಲಿ, ಸಿದ್ದು ದಳವಿ ತಾನಾಜಿ ರೋಖಡೆ, ರಾಹುಲ ಚಾಬುಕಾಸವಾರ, ಅಭಿಷೇಕ್ ಗಂಗನಗೌಡ, ಹಾಗೂ ಎಲ್ಲ ಯುವಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.