ಕಿಮ್ಸನ್ ಡಾ.ಪೂಜಾ ಭಟ್ ರ ಚಿಕಿತ್ಸೆ ಫಲಿಸಲಿಲ್ಲ: ಕಣ್ಣೀರಾದ ಕಿಮ್ಸ್ ಹೊರಾಂಗಣ..!
ಹುಬ್ಬಳ್ಳಿ: ಗೆಳೆಯರೊಂದಿಗೆ ಕಾರವಾರ ಮತ್ತು ಗೋವಾಗೆ ಪ್ರವಾಸಕ್ಕೆ ಹೊರಟಿದ್ದ ಸಮಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕಿಮ್ಸನ ವೈಧ್ಯ ವಿದ್ಯಾರ್ಥಿನಿಯೋರ್ವರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಪ್ರವಾಸಕ್ಕೆ ಹೊರಟಿದ್ದ ಕಾರೊಂದು ವಿಶ್ವೇಶ್ವರ ಭಟ್ ಎನ್ನುವವರಿಗೆ ಸೇರಿದ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಡಾ.ಪೂಜಾ ಭಟ್ ಇಂದು ಚಿಕಿತ್ಸೆ ಫಲಿಸದೇ ಸಾವಿಗೀಡಾದರು.
ವೈಧ್ಯ ವಿದ್ಯಾರ್ಥಿನಿಯ ಸಾವಾದ ಹಿನ್ನೆಲೆಯಲ್ಲಿ ಪಾರ್ಥಿವ್ ಶರೀರವನ್ನ ಹುಬ್ಬಳ್ಳಿ ಕಿಮ್ಸನ ಮುಂಭಾಗದಲ್ಲಿಟ್ಟು ಅಂತಿಮ ನಮನ ಸಲ್ಲಿಸಲಾಯಿತು. ಎಲ್ಲರೊಂದಿಗೆ ಲವಲವಿಕೆಯಿಂದಿದ್ದ ಡಾ.ಪೂಜಾ, ಇನ್ನಿಲ್ಲವೆನ್ನುವುದನ್ನ ಅರಗಿಸಿಕೊಳ್ಳಲಾಗದ ಹಲವರು, ಅಲ್ಲಿಯೇ ಕಣ್ಣೀರಾದರು.
ಮಹಾವಿದ್ಯಾಲಯದ ನೂರಾರೂ ವಿದ್ಯಾರ್ಥಿಗಳು, ಉಪನ್ಯಾಸಕರು ಎಲ್ಲರೂ ಸೇರಿ ಅಂತಿಮ ನಮನ ಸಲ್ಲಿಸಿದರು. ಡಾ.ಪೂಜಾ ಭಟ್ ಸಾವು, ಕಿಮ್ಸ್ ನಲ್ಲಿ ನೀರವಮೌನವನ್ನ ಮೂಡಿಸಿತ್ತು.