ಎಸ್ಪಿ ಹೆಸರಲ್ಲಿ ಪಿಎಸ್ಐಗೆ ಎಂಟೂವರೆ ಲಕ್ಷ ಪಂಗನಾಮ..!
1 min readಕಲಬುರಗಿ: ಜಿಲ್ಲೆಯ ಜೇವರ್ಗಿ ಪಿಎಸ್ಐಯೊಬ್ಬರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಹೆಸರನ್ನ ಹೇಳಿ ಬರೋಬ್ಬರಿ ಎಂಟೂವರೆ ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣವೊಂದು ಸ್ವತಃ ಪಿಎಸ್ಐ ಪೊಲೀಸ್ ಠಾಣೆಗೆ ದೂರು ನೀಡುವ ಮೂಲಕ ಬಹಿರಂಗವಾಗಿದೆ.
ಕಲಬುರಗಿ ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಹೆಸರಲ್ಲಿ ಜೇವರ್ಗಿ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಹೂಗಾರ್ ಬಳಿ ಹಣ ವಸೂಲಿ ಮಾಡಲಾಗಿದೆ. ಇಂತಹ ವಂಚನೆ ಮಾಡಿದ್ದು ಜೇವರ್ಗಿ ತಾಲ್ಲೂಕಿನ ಕೊಂಡಗುಳಿ ಗ್ರಾಮದ ಖಾಸಿಂ ಪಟೇಲ್ ಎಂಬಾತ. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಜೊತೆ ಪಿಎಸ್ಐಗೆ ಫೋಟೊ ತೋರಿಸಿದ್ದ ಖಾಸಿಂ ಪಟೇಲ್, ಕಾನೂನು ಸುವ್ಯವಸ್ಥೆಯಲ್ಲಿ ತೊಡಕು ಉಂಟಾದ್ರೆ ಬಗೆಹರಿಸೋದಾಗಿ ಪಿಎಸ್ಐ ಮಂಜುನಾಥ ಹೂಗಾರಗೆ ನಂಬಿಸಿದ್ದ.
ಕಲಬುರಗಿ ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಅವರ ತೀರಾ ಪರ್ಸನಲ್ ನಂಬರ್ ಅಂತಾ ಹೊಸದೊಂದು ನಂಬರನ್ನ ಖಾಸಿಂ ಪಟೇಲ್ ಪಿಎಸ್ಐಗೆ ನೀಡಿದ್ದ. 7411447060 ನಂಬರನ್ನ ಪಿಎಸ್ಐ ಮೊಬೈಲ್‌ನಲ್ಲಿ ಎಸ್ ಎಂ ಜಿ ಅಂತಾ ಸೇವ್ ಕೂಡಾ ಮಾಡಿದ್ದ ಖಾಸಿಂ ಪಟೇಲ್. ಎಸ್ ಎಂ ಜಿ ಅಂತಾ ಸೇವ್ ಮಾಡಿರುವ ನಂಬರ್ ಗೆ ವಾಟ್ಸ್ ಆಪ್ ನಲ್ಲಿ ಕಲಬುರಗಿ ಎಸ್ ಪಿ ಫೋಟೊ ಅಳವಡಿಸಿದ್ದ ಖಾಸಿಂ ಪಟೇಲ್.
ಎಸ್ ಎಂ ಜಿ ನಂಬರ್ ಇದು ನನಗೆ, ನಿನಗೆ ಮತ್ತು ಎಸ್ಪಿಗೆ ಮಾತ್ರ ಗೊತ್ತಿರುವ ನಂಬರ್ ಅಂತಾ ಸೇವ್ ಮಾಡಿಸಿದ್ದ ಖಾಸಿಂ, ಬಳಿಕ ಎಸ್ ಎಂ ಜಿ ನಂಬರನಿಂದ ತುರ್ತಾಗಿ ಹಣ ಬೇಕಾಗಿದೆ ಎಂದು 2.5 ಲಕ್ಷ ಮತ್ತು 6 ಲಕ್ಷ ಹಣ ಪಡೆದಿದ್ದ. ಕಳೆದ ಎರಡು ದಿನದ ಹಿಂದೆ ಅದೆ ನಂಬರ್ ನಿಂದ ವಾಟ್ಸ್ ಆಪ್ ವಾಯ್ಸ್ ಕಾಲ್ ರಿಸೀವ್ ಮಾಡಿದ್ದ ಪಿಎಸ್ಐ ಮಂಜುನಾಥ್ ಹೂಗಾರಗೆ, ವಾಟ್ಸ್ ಆಪ್ ವಾಯ್ಸ್ ಕಾಲ್ ನಲ್ಲಿ ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲಿ ಹೆಣ್ಣು ಮಕ್ಕಳು ಮಾತಾಡಿರುವ ಧ್ವನಿ ಕೇಳಿ ಅನುಮಾನ ಬಂದಿದೆ.
ಅನುಮಾನದ ಹಿನ್ನೆಲೆಯಲ್ಲಿ ಕಲಬುರಗಿ ಎಸ್ಪಿ ಸಿಮಿ ಮರಿಯಮ್ ಜಾರ್ಜರನ್ನ ಭೇಟಿ ಮಾಡಿ ವಿಚಾರಿಸಿದಾಗ ನಿಜ ಸ್ವರೂಪ ಬಯಲಾಗಿದೆ. ಎಚ್ಚೆತ್ತ ಪಿಎಸ್ಐ ಹೂಗಾರ ಸ್ಷೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಖಾಸಿಂ ಪಟೇಲ್ ನಿಂದ 2 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.