ಕನ್ನಡಮ್ಮ: ಶೋಭಾ ಗುಂಡಮಿ
1 min readಕಲಬುರಗಿ: ಕಿಕ್ಕಿರಿದು ನೆರೆದಿದ್ದ ಜನ ಸಾಗರದ ನಡುವೆ ಬಾಗಿದ ಬೆನ್ನಿನ ಅಜ್ಜಿಯೊಬ್ಬರು, ಕೊಲು ಹಿಡಿದುಕೊಂಡು ಸಮ್ಮೇಳನದತ್ತ ನಡೆದು ಬರುತ್ತಿದ್ದಾಗ, ಸಾಕ್ಷಾತ ಕನ್ನಡಾಂಬೆಯೆ ಅಕ್ಷರ ಜಾತ್ರೆಗೆ ಬರುತ್ತಿರುವಂತೆ ಭಾಸವಾಗುತ್ತಿತ್ತು. ಹೌದು ಈ ಇಳಿ ವಯಸ್ಸಿನಲ್ಲಿಯೂ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆನಂದಿಸಲು ಬೆಂಗಳೂರಿನಿಂದ ವಿಶೇಷ ಅಲಂಕಾರದೊಂದಿಗೆ ಈ ತಾಯಿ ಕಲಬುರಗಿಯತ್ತ ಬಂದಿದ್ದಾರೆ. ಅಂದ ಹಾಗೆ ಅವರ ಹೆಸರು ಶೋಭಾ ಗುಂಡೆಮಿ. ಅವರ ಕನ್ನಡ ಪ್ರೀತಿಗೆ ನಮ್ಮ ನಮನ.