ಹಾಡುಹಗಲೇ ಕೊಲೆ: ಕಸಬಾಪೇಟೆಯಲ್ಲಿ ತಲ್ಲಣ ಮೂಡಿಸಿದ ಘಟನೆ

ಹುಬ್ಬಳ್ಳಿ: ತನ್ನ ಮುಖವನ್ನ ಪದೇ ಪದೇ ನೋಡತೊಡಗಿದ ಎಂದು ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪಠಾಣಗಲ್ಲಿಯಲ್ಲಿ ಸಂಭವಿಸಿದೆ.
ನಡು ಮಧ್ಯಾಹ್ನವೇ ಶಾಬುದ್ಧೀನ ಎಂಬಾತನನ್ನ ಅದೇ ಪ್ರದೇಶದ ಶಂಶುದ್ಧೀನ ಮತ್ತು ಹಾಜಿ ಎಂಬುವವರು 12 ಬಾರಿ ಇರಿದು ಕೊಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಶಾಬುದ್ಧೀನನನ್ನ ಕಿಮ್ಸ್ ಗೆ ರವಾನೆ ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.