ಅಕ್ರಮ ಮರಳು ಸಾಗಾಣಿಕೆ: ಕೆರೆಯಲ್ಲಿ ಮಣ್ಣಿನ ಗುಡ್ಡ ಕುಸಿದು ಯುವಕ ಸಾವು

ಕೋಲಾರ: ಕೆರೆಯಲ್ಲಿ ಅಕ್ರಮವಾಗಿ ಮರಳು ತೆಗೆಯುವ ವೇಳೆ ಮಣ್ಣಿನ ಗುಡ್ಡ ಕುಸಿದು ಯುವಕನೋರ್ವ ಸಾವಿಗೀಡಾದ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸಿ ಕುರುವೇನೂರು ಗ್ರಾಮದಲ್ಲಿ ನಡೆದಿದೆ.
ಸಿ ಕುರುವೇನೂರು ಗ್ರಾಮದ ಭರತ್ ಮೃತ ಯುವಕ. ಕಳೆದ ಹದಿನೈದು ದಿನದಿಂದ ಅಕ್ರಮವಾಗಿ ಕೆರೆಯಲ್ಲಿ ಮರಳು ತೆಗೆಯುತ್ತಿದ್ದ ದಂಧಕೋರರು. ಮರಳು ತೆಗೆಯುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು ಯಾವುದೇ ಕ್ರಮ ಜರುಗಿಸದೆ ಮೌನವಾಗಿದ್ದರು. ಈಗ ಯುವಕನೋರ್ವ ಸಾವಿಗೀಡಾಗಿದ್ದು, ಈಗಲಾದರೂ ಎಚ್ಚೆತ್ತುಕೊಳ್ಳುತ್ತಾರಾ ಕಾದು ನೋಡಬೇಕಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.