ಕಂಟೈಮೆಂಟ್ ಜೋನ್ ಗಳಲ್ಲಿನ ಹೆಚ್ಚಿನ ಜನರ ಮಾದರಿ ಸಂಗ್ರಹಕ್ಕೆ ಮುಂದಾದ ಜಿಲ್ಲಾಡಳಿತ

ದಾವಣಗೆರೆ: 1096 ಮಾದರಿಗಳ ಫಲಿತಾಂಶ ಬಾಕಿಯಿದ್ದು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 89ಕ್ಕೇರಿದೆ. ಇಬ್ಬರು ಗುಣಮುಖ, ನಾಲ್ವರ ಸಾವು. 83 ಜನ ಅಕ್ಟಿವ್ ಪ್ರಕರಣಗಳಿವೆ.
ಸೋಂಕಿತರಿಗೆ ಜಿಲ್ಲಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಗರದ ಜಾಲಿನಗರ, ಇಮಾಂನಗರ ಭಾಷಾನಗರ ಹಾಗೂ SPS ನಗರದ ನಾಲ್ಕು ಜೋನ್ ಗಳಲ್ಲಿ 78 ಸೋಂಕಿತರು ಪತ್ತೆ. ಒಟ್ಟು 8 ಕಂಟೈಮೆಂಟ್ ಜೋನ್ ಗಳಲ್ಲಿ ಈವರೆಗೆ 664 ಜನರ ಸ್ಯಾರಿ ಹಾಗೂ ILA ಕೇಸ್ ಗಳ ಮಾದರಿ ಸಂಗ್ರಹ. 657 ನೆಗೆಟಿವ್ ಹಾಗೂ 07 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.