ಮುಂದುವರಿದ ಚಿರತೆ ದಾಳಿ-ಕರು, ಕುರಿ, ಕೋಳಿ ಬಲಿ: ಆತಂಕದಲ್ಲಿ ಜನತೆ

ಚಾಮರಾಜನಗರ: ತಾಲೂಕಿನ ಕಡುವಿನಕಟ್ಟೆ ಹುಂಡಿ ಗ್ರಾಮದಲ್ಲಿ ಮನೆಯ ಹಿಂಭಾಗದ ದನದ ಕೊಟ್ಟಿಗೆಗೆ ನುಗ್ಗಿ ದಾಳಿ ನಡೆಸಿರುವ ಚಿರತೆ ಬಸವಣ್ಣ ಎಂಬುವವರಿಗೆ ಸೇರಿದ ಕರು, ಕುರಿ, ಕೋಳಿಯನ್ನ ತಿಂದು ತೇಗಿದೆ.
ಹೊಲ ಗದ್ದೆಗಳಲ್ಲಿ ದಾಳಿ ನಡೆಸುತ್ತಿದ್ದ ಚಿರತೆ ಇದೀಗ ಗ್ರಾಮದೊಳಗೆ ನುಗ್ಗಿ ದಾಳಿ ನಡೆಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ಮೂರು ಜನರ ಮೇಲೆ ಮಾರಣಾಂತಿಕ ದಾಳಿ ನಡೆಸಿರುವ ಚಿರತೆ ಸೆರೆಗೆ ಗ್ರಾಮಸ್ಥರು ಒತ್ತಾಯಿಸಿದ್ದು, ಸ್ಥಳಕ್ಕೆ ಚಾಮರಾಜನಗರ ವಲಯ ಅರಣ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ.