ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಬಸ್: ಚಾಲಕರ ಸಮಯಪ್ರಜ್ಞೆ ತಪ್ಪಿದ ಭಾರೀ ಅನಾಹುತ
ಬೆಳಗಾವಿ: ಕೇವಲ ಹತ್ತು ಸಾವಿರ ಕಿಲೋಮೀಟರ್ ಓಡಿದ ಬಸ್‌ಗೆ ತಡರಾತ್ರಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಿಪ್ಪಾಣಿ ಡಿಪೋದಲ್ಲಿ ಸಂಭವಿಸಿದೆ.
ಎಂದಿನಂತೆ ರಾತ್ರಿಯವರೆಗೂ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಬಂದಿದ್ದ ಬಸ್‌ನ್ನ ಡಿಪೋದಲ್ಲಿ ನಿಲ್ಲಿಸಲಾಗಿತ್ತು. ಇದೊಂದೆ ಬಸ್ಸಿಗೆ ಬೆಂಕಿ ಹತ್ತಿದಾಗ, ಅಕ್ಕಪಕ್ಕದಲ್ಲಿ ಹಲವು ಬಸ್‌ಗಳಿದ್ದವು. ತಕ್ಷಣವೇ ಜಾಗೃತರಾದ ಚಾಲಕರು ಬೆಂಕಿ ಹತ್ತಿದ ಬಸ್ ಬಳಿಯಿದ್ದ ಬಹುತೇಕ ಬಸ್‌ಗಳನ್ನ ಬೇರೇಡೆ ಸ್ಥಳಾಂತರ ಮಾಡಿದರು. ಇಲ್ಲದಿದ್ದರೇ ಇನ್ನಷ್ಟು ಬಸ್‌ಗಳು ಸುಟ್ಟು ಹೋಗುತ್ತಿದ್ದವು. ಮಾಹಿತಿ ಪಡೆದ ಅಗ್ನಿಶಾಮಕ ದಳದವರು ಆಗಮಿಸಿ, ಬೆಂಕಿ ನಂದಿಸಿದರಾದರೂ ಬಸ್ ಮಾತ್ರ ಸಂಪೂರ್ಣ ಸುಟ್ಟು ಹೋಗಿದೆ. ಈ ಘಟನೆ ಡಿಪೋದಲ್ಲಿ ಆತಂಕದ ವಾತಾವರಣ ಸೃಷ್ಟಿಸಿತ್ತು.
ನಿಪ್ಪಾಣಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಹತ್ತಲು ನಿಖರವಾದ ಕಾರಣವೇನು ಎಂಬುದನ್ನ ತಿಳಿಯುವ ಪ್ರಯತ್ನ ನಡೆದಿದೆ.