Posts Slider

Karnataka Voice

Latest Kannada News

ಕೃಷಿಕನ ಕನಸನ್ನ ನನಸು ಮಾಡಲು ಹೊರಟ ರೈತ ನಾಯಕ ಅಮೃತ ದೇಸಾಯಿ

1 min read
Spread the love

ಧಾರವಾಡ: ತುಪ್ಪರಿ ಹಳ್ಳ ಏತ ನೀರಾವರಿ ಹಾಗೂ ಅದರ ಜೀರ್ಣೋದ್ದಾರ ಕಾರ್ಯಕ್ಕೆ ಡಿ ಪಿ ಆರ್ (ವಿವರವಾದ ಯೋಜನಾ ವರದಿ) ಸಲ್ಲಿಸಲು ಶಾಸಕ ಅಮೃತ್ ದೇಸಾಯಿ ಇಂದು ತುಪ್ಪರಿ ಹಳ್ಳದ ಸರ್ವೇ ಕಾರ್ಯಕ್ಕೆ ಚಾಲನೆ ನೀಡಿದರು.

ಧಾರವಾಡ ಗ್ರಾಮೀಣ ಕ್ಷೇತ್ರದ ಬಹುತೇಕ ರೈತರ ಬಲು ದಿನದ ಕನಸಾಗಿದ್ದ ಯೋಜನೆಯಿದು ತುಪ್ಪರಿ ಹಳ್ಳ ಏತ ನೀರಾವರಿ ಹಾಗೂ ಅದರ ಜೀರ್ಣೋದ್ದಾರ ಕಾರ್ಯ ನಡೆಯಲಿ ಎಂದು ಬಹುತೇಕ ಕೃಷಿಕರು ಬಯಸಿದ್ದರು. ಅದೇ ಕಾರಣಕ್ಕೆ ಇಂದು ವಿವರವಾದ ಯೋಜನಾ ವರದಿ ಸಲ್ಲಿಸುವ ಉದ್ದೇಶದಿಂದಲೇ ರೈತ ನಾಯಕ ಶಾಸಕ ಅಮೃತ್ ದೇಸಾಯಿ ಹಳ್ಳದ ಸರ್ವೇ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಸಾವಿರಾರೂ ರೈತರ ಕನಸನ್ನ ನನಸು ಮಾಡಲು ಹೊರಟಿದ್ದಾರೆ.

ಇದೇ ಸಮಯದಲ್ಲಿ ಮಾತನಾಡಿದ ಶಾಸಕರು, ಈ ಭಾಗದ ಸಮಸ್ತ ರೈತರಿಗೆ ಏತ ನೀರಾವರಿ ಯೋಜನೆಗಳನ್ನು ಸಫಲ ಮಾಡಲು ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಬರುವಂತಹ ದಿನಗಳಲ್ಲಿ ರೈತರ ಹನಿ/ತುಂತುರು ನೀರಾವರಿ ಕನಸು ನನಸಾಗುವಂತಹ ಸಂಪೂರ್ಣ ನಂಬಿಕೆ ನಮಗಿದೆ. ತುಪ್ಪರಿ ಹಳ್ಳವು  ಒಟ್ಟು 82+20 ಕಿ.ಮೀ ಉದ್ದ ಇದ್ದು ಒಟ್ಟು 1123 ಚ.ಕೀ.ಮೀ ಜಲಾನಯನ  ಹೊಂದಿದ್ದು ಮಳೆಗಾಲದಲ್ಲಿ 2.175 ಟಿ.ಎಂ.ಸಿ ನೀರಿನ ಲಭ್ಯತೆ ಇರುತ್ತದೆ. ಆದರೆ, ಬ್ಯಾರೇಜುಗಳು ಶೀತಲಾವ್ಯವಸ್ಥೆಯಲ್ಲಿದ್ದರಿಂದ ನೀರಿನ ಶೇಖರಣೆ ಕುಂದಿದ್ದು ಬ್ಯಾರೇಜುಗಳ ಪುನಶ್ಚೇತನ ಮಾಡಿ ಏತ ನೀರಾವರಿ ಮೂಲಕ ಹನಿ/ತುಂತುರು ನೀರಾವರಿ ಯೋಜನೆಗಳನ್ನು ಕೈಗೊಂಡಲ್ಲಿ ಧಾರವಾಡ ತಾಲೂಕಿನ 20 ಹಳ್ಳಿಗಳ ಸುಮಾರು 10 ಸಾವಿರ ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಕಲ್ಪಿಸಬಹುದೆಂದು ಎಂದು ಹೇಳಿದರು.


Spread the love

Leave a Reply

Your email address will not be published. Required fields are marked *

You may have missed