ಕನಕಪುರ ಮತ್ತೆ ಲಾಕ್ ಡೌನ್: ಹೆಚ್ಚುತ್ತಿರುವ ಪಾಸಿಟಿವ್ ಗೆ ಹೊಸ ಕ್ರಮ
ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರು ಹೆಚ್ಚುತ್ತಿರುವ ಪರಿಣಾಮ ಜುಲೈ 1ರವರೆಗೆ ಸ್ವಯಂ ಲಾಕ್ಡೌನ್ ಗೆ ಜನರ ನಿರ್ಧಾರ ಮಾಡಿದ್ದಾರೆ.
ಬೆಳಗ್ಗೆ 7 ರಿಂದ 11ರವರೆಗೆ ಅಗತ್ಯ ವಸ್ತುಗಳ ಮಾರಾಟ. ಉಳಿದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳ ಬಂದ್ ಮಾಡಲು ನಿರ್ಧಾರಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಮಾರಾಟ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿ, ಮಾಂಸ ಇತ್ಯಾದಿ ಮಾರಾಟದ ವೇಳೆ ಸ್ಯಾನಿಟೈಸರ್ ಕಡ್ಡಾಯಗೊಳಿಸಲಾಗಿದೆ.
ರಾಮನಗರ ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ಲಾಕ್ಡೌನ್ ಮುಂದಾದ ಮೊದಲ ತಾಲೂಕು ಕನಕಪುರ. 36 ಕೊರೋನಾ ಪಾಸಿಟಿವ್ ಪ್ರಕರಣಗಳು ಕನಕಪುರ ತಾಲೂಕಿಗೆ ಸೇರಿವೆ. ನವೋದಯ ಆರೋಗ್ಯ ಕೇಂದ್ರ ವೈದ್ಯ ದಂಪತಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ವೈದ್ಯರ ಬಳಿ ಚಿಕಿತ್ಸೆ ಕೆಲವರಿಗೆ ಪಾಸಿಟಿವ್ ಬಂದಿದೆ.