ಪೆಟ್ರೋಲ್-ಡಿಸೇಲ್ ಬೆಲೆಯೇರಿಕೆ: ಸೈಕಲ್ ಯೇರಿದ ಕಾಂಗ್ರೆಸ್ಸಿಗರು
ಧಾರವಾಡ: ಕಳೆದ ಹಲವು ದಿನಗಳಿಂದ ನಿರಂತರವಾಗಿ ಪೆಟ್ರೋಲ್-ಡಿಸೇಲ್ ಬೆಲೆಯೇರಿಕೆಯಾಗುತ್ತಿದ್ದು, ಕೇಂದ್ರ ಸರಕಾರ ಸಾರ್ವಜನಿಕರ ಮೇಲೆ ಹೊರೆ ಹಾಕುತ್ತಿದೆ ಎಂದು ದೂರಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಕಾಂಗ್ರೆಸ್ ವಕ್ತಾರ ಪಿ.ಎಚ್.ನೀರಲಕೇರಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯು ಜ್ಯೋತಿ ತಾಲೀಮನಿಂದ ಆರಂಭಗೊಂಡಿತು. ಹಲವರು ಸೈಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಬಡವರ, ಮಧ್ಯಮವರ್ಗದ ಜನರ ಮೇಲೆ ನಿರಂತರವಾಗಿ ಬೆಲೆ ಏರಿಕೆಯ ದಾಳಿ ನಡೆಯುತ್ತಿದೆ. ಕಚ್ಚಾತೈಲದ ದರ ಕಡಿಮೆಯಿದ್ದಾಗಲೂ, ಉತ್ಪನ್ನಗಳ ಬೆಲೆಯನ್ನ ಏರಿಸಲಾಗುತ್ತಿದೆ ಎಂದು ನೀರಲಕೇರಿ ದೂರಿದರು.