ಮರಳು ಮಾಫಿಯಾ-ಸ್ವತಃ ಫೀಲ್ಡಿಗೀಳಿದ ಕಾಂಗ್ರೆಸ್ ಶಾಸಕ- ಮಾಡಿದ್ದೇನು ಗೊತ್ತಾ..?
ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ನಿರಂತರವಾಗಿ ಮರಳು ಮಾಫಿಯಾ ನಡೆಯುತ್ತಿದ್ದರೂ ಪೊಲೀಸರು ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಅಲ್ಲಿನ ಶಾಸಕ ಪ್ರಿಯಾಂಕಾ ಖರ್ಗೆ ಸ್ವತಃ ಫೀಲ್ಡಿಗಿಳಿದು, ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.
ತಾವೂ ಭೇಟಿ ನೀಡಿದ್ದನ್ನ ಫೇಸ್ ಬುಕ್ ನಲ್ಲಿ ಶಾಸಕರು ಹೀಗೆ ಬರೆದುಕೊಂಡಿದ್ದಾರೆ ನೋಡಿ…
ನನ್ನ ಮತಕ್ಷೇತ್ರವಾದ ಚಿತ್ತಾಪುರ ತಾಲೂಕಿನಲ್ಲಿ ಅಕ್ರಮ ಮರಳು ದಂಧೆಯ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ಕಾಟಮದೇವರಹಳ್ಳಿಯ ಬಳಿಯ ಕಾಗಿನ ನದಿಯಿಂದ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ಅಡ್ಡೆಗಳ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಲಾಯಿತು.
ಅಕ್ರಮ ಮರುಳು ಸಾಗಾಣಿಕೆಗೆ ಕಡಿವಾಣ ಹಾಕುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.