ನಿರಾಣಿ ಶುಗರ್ಸ್ಗೆ ಪಾಂಡವರಪುರ ಶುಗರ್ ಕಾರ್ಖಾನೆ: 40ವರ್ಷಕ್ಕೆ 405 ಕೋಟಿ
ಬೆಂಗಳೂರು: ಬಾಗಲಕೋಟೆ ಮೂಲದ ನಿರಾಣಿ ಶುಗರ್ಸ್‌ಗೆ ಪಾಂಡವಪುರ ಶುಗರ್ ಕಾರ್ಖಾನೆಯನ್ನ ಗುತ್ತಿಗೆ ನೀಡಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಪ್ರಕಟಿಸಿದ ಬೆನ್ನಲ್ಲೇ ಮುರುಗೇಶ ನಿರಾಣಿ, ಮುಖ್ಯಮಂತ್ರಿ ಯಡಿಯೂರಪ್ಪರನ್ನ ಭೇಟಿ ಮಾಡಿದರು.
40 ವರ್ಷಗಳ ಅವಧಿಗೆ ಗುತ್ತಿಗೆಯನ್ನ 405 ಕೋಟಿ ರೂಪಾಯಿಗೆ ನೀಡಲಾಗಿದ್ದು, PSSK ಅನ್ನು Nirani sugars limited ಗುತ್ತಿಗೆಗೆ ನೀಡಲು ಸರ್ಕಾರ ನಿರ್ಧಾರ ಮಾಡಿದ ಬೆನ್ನಲ್ಲೇ ಸಿಎಂ ಕಾವೇರಿ ನಿವಾಸದಲ್ಲಿ ಸಿಎಂ ಬಿಎಸ್ವೈ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ತಮಗೆ ಗುತ್ತಿಗೆಗೆ ನೀಡಿದ್ದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮುರುಗೇಶ ನಿರಾಣಿ ಧನ್ಯವಾದ ತಿಳಿಸಿದರು. ಈ ಸಮಯದಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯ್ಕ ಉಪಸ್ಥಿತರಿದ್ದರು.