ಶಿಕ್ಷಕರ ಸಮಸ್ಯೆ ಕೇಳಲು ರಾಜ್ಯಾಧ್ಯಕ್ಷ ಷಡಕ್ಷರಿಯರಿಗೆ ಟೈಮ್ ಇಲ್ವಾ..? EXCLUSIVE AUDIO
ಮೊದಲು ಇದನ್ನ ನೋಡಿ ಬಿಡಿ..
ಧಾರವಾಡ: ಶಿಕ್ಷಕರ ನೋವನ್ನ ಕೇಳಬೇಕಾದ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಿಗೆ ಸಮಯವೇ ಇಲ್ಲವೆನ್ನುವ ಆಡೀಯೋಯೊಂದು ವೈರಲ್ ಆಗಿದ್ದು, ಅವರ ಸಂಘದವರು ಅವರಿಗೆ ಚೆನ್ನಾಗಿ ಹೇಳುತ್ತಾರೆಂದು ಹೇಳಿಕೊಂಡಿದ್ದಾರೆ.
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಬಿಇಓ ಒಬ್ಬರಿಗೆ ಆಗಿರುವ ತೊಂದರೆಯನ್ನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರಿಗೆ ಹೇಳಲು ಮುಂದಾಗಿದ್ದಾರೆ.
ಸೋಜಿಗವೆಂದರೇ, ಬೇಗ ಹೇಳಿ ಬೇಗ ಹೇಳಿ ಎನ್ನುತ್ತಲೇ ನಮ್ಮ ಸಂಘದ ಜಿ್ಲ್ಲಾಧ್ಯಕ್ಷರಿಗೆ ತಿಳಿಸಿ ಎನ್ನುತ್ತಲೇ ಮಾತು ಮುಗಿಸುತ್ತಾರೆ. ಬಿಇಓ ಒಬ್ಬರಿಗೆ ಸಹಾಯ ಮಾಡಬೇಕೆಂಬ ಆಸೆ ಹೊತ್ತ ಉಪ್ಪಿನವರಿಗೆ ಈ ಘಟನೆ ಬೇಸರ ಮೂಡಿಸಿದೆ.