ಬಿಜೆಪಿಯ ಮುಖಂಡನ ಜಾಗದಲ್ಲಿ ಪುಂಡಾಟ- ಸಿಸಿಟಿವಿ ನೋಡಿದ್ರೇ ನೀವೂ ಗಾಬರಿಯಾಗ್ತೀರಾ..
ಮೈಸೂರು: ಮಾಜಿ ಕೆಜೆಪಿ ಮುಖಂಡ ಹಾಲಿ ಬಿಜೆಪಿ ಮುಖಂಡನಿಗೆ ಸೇರಿದ ಖಾಸಗಿ ಜಾಗಕ್ಕೆ ನುಗ್ಗಿರುವ ತಂಡವೊಂದು ಪುಂಡಾಟ ಮಾಡಿ ಸಿಕ್ಕಸಿಕ್ಕ ವಸ್ತುಗಳನ್ನ ಚೆಲ್ಲಾಪಿಲ್ಲಿ ಮಾಡಿ, ಮುಖಂಡನ ಮೇಲೂ ಹಲ್ಲೆ ಮಾಡಿರುವ ಘಟನೆ ಮೈಸೂರಿನ ಎಚ್.ಡಿ. ಕೋಟೆ ರಸ್ತೆಯ ನಾಚನಹಳ್ಳಿ ಪಾಳ್ಯದ ಬಳಿ ನಡೆದಿದೆ.
ಕೈಯಲ್ಲಿ ಮಚ್ಚು, ಲಾಂಗು ಹಿಡಿದುಕೊಂಡು ಬಂದಿರುವ ದುಷ್ಕರ್ಮಿಗಳು ಕೈಗೆ ಸಿಕ್ಕಿದ್ದನ್ನ ಧ್ವಂಸ ಮಾಡಿದ್ದಾರೆ. ಇದೇಲ್ಲವೂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಅದೇ ಸಮಯದಲ್ಲಿ ಯಾರಾದರೂ ಸಿಕ್ಕಿದ್ದರೇ ಜೀವಸಹಿತ ಉಳಿಯುತ್ತಿರಲಿಲ್ಲ ಎನ್ನಲಾಗುತ್ತಿದೆ.
2013ರಲ್ಲಿ ಚಾಮರಾಜನಗರ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿದ್ದಅರುಣ ಗೌಡಗೆ ಸೇರಿದ ಜಾಗದಲ್ಲಿ ಈ ಗಲಾಟೆ ನಡೆದಿದೆ. ಮಾಂಸದಂಗಡಿಯ ತ್ಯಾಜ್ಯವನ್ನ ಪಕ್ಕದಲ್ಲಿಯೇ ಸುರಿಯುತ್ತಿದ್ದನ್ನ ಪ್ರಶ್ನಿಸಿದ್ದಕ್ಕೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಗಾಯಗೊಂಡಿರುವಅರುಣಗೌಡ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಸಿಪಿ ಪ್ರಕಾಶಗೌಡ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಗಳು ಭಯಾನಕವಾಗಿವೆ.