ಹಕ್ಕ್… ಎದ್ರೋ ಕುಂಭಕರ್ಣರು.. ಅವತ್ತು ಟೈಮ್ ಇರಲಿಲ್ಲ.. ಇವತ್ತು ಮನವಿ ಮಾಡ್ತಿದ್ದಾರೆ..!
ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗೆ ತೊಂದರೆಯಾಗಿದೆ. ಅವರಿಗೆ ಸಹಾಯ ಮಾಡಿ ಎಂದು ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿಯವರಿಗೆ ಗ್ರಾಮೀಣ ಸಂಘದವರು ಮಾಹಿತಿ ಕೊಡುತ್ತಿದ್ದಾಗ ಟೈಮ್ ಇರಲೇ ಇಲ್ಲ. ಆದರೆ, ಗ್ರಾಮೀಣ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಪ್ರಯತ್ನದಿಂದ ಮಹದೇವ ಮಾಳಗಿಯವರ ಕುಟುಂಬಕ್ಕೆ ಅನುಕೂಲವಾಗುತ್ತಿದೆ ಎಂದು ಗೊತ್ತಾದ ತಕ್ಷಣವೇ, ತಾವೂ ಎದ್ದು ಬಿದ್ದು ಪತ್ರವನ್ನ ಬರೆದಿದ್ದಾರೆ.
ಮೊನ್ನೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಕಾಲ್ ಮಾಡಿದ್ದು ಮತ್ತೂ ಅದಕ್ಕೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದ್ದು ಹೇಗಿತ್ತು ಎಂಬುದನ್ನ ಮತ್ತೋಮ್ಮೆ ಕೇಳಿಬಿಡಿ… ಇವರು ಹೇಗೆ ಅನ್ನೋದು ಗೊತ್ತಾಗಿಬಿಡುತ್ತೆ…