Posts Slider

Karnataka Voice

Latest Kannada News

ಗಾಂಜಾ ಘಮಟು- ಹುಬ್ಬಳ್ಳಿಯ ಕಿಂಗ್ ಫಿನ್ ಮಾಲು ಸಮೇತ ಅಂದರ್

1 min read
Spread the love

ಉತ್ತರಕನ್ನಡ: ವಾಣಿಜ್ಯನಗರಿ ಹುಬ್ಬಳ್ಳಿಯಿಂದ ಗಾಂಜಾ ತೆಗೆದುಕೊಂಡು ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಕಿಂಗ್ ಫಿನ್ ಹಿಡಿಯುವಲ್ಲಿ ಶಿರಸಿಯ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಸುನೀಲ್ ಎಂಬಾತನೇ ಬಂಧಿತನಾಗಿದ್ದು, ಆರೋಪಿಯಿಂದ 2‌ಕೆಜಿ 700 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಕಾಲೇಜು ಯುವಕನಂತೆ ಬಟ್ಟೆ ಧರಿಸಿ, ಬ್ಯಾಗು ಹಾಕಿಕೊಂಡು ಅದ್ರಲ್ಲೇ ಗಾಂಜಾವನ್ನ ಸಪ್ಲಾಯಿ ಮಾಡುತ್ತಿದ್ದನೆಂದು ಗೊತ್ತಾಗಿದೆ.

ಉತ್ತರಕನ್ನಡ ಜಿಲ್ಲೆಯ ಪ್ರಮುಖ ಪಟ್ಟಣಗಳಿಗೆ ಈತನೇ ಸಪ್ಲಾಯಿ ಮಾಡುತ್ತಿದ್ದೂ, ಹುಬ್ಬಳ್ಳಿಯಿಂದಲೇ ಗಾಂಜಾ ಸರಬರಾಜು ಮಾಡುತ್ತಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಜಿಲ್ಲೆಯ ಹಲವು ಭಾಗಗಳಲ್ಲಿ ಸುನೀಲಗೆ ಏಜೆಂಟರಿದ್ದು, ಅವರ ಮೂಲಕ ಬೇರೆ ಬೇರೆ ಜಾಗದಲ್ಲಿ ಗಾಂಜಾ ಮಾರಾಟ ನಡೆಯುತ್ತಿದ್ದು, ಸುನೀಲನೇ ಪ್ರಮುಖವಾದ ಆರೋಪಿ ಎನ್ನುವುದು ಗೊತ್ತಾಗಿದೆ.

ಹುಬ್ಬಳ್ಳಿಯಿಂದ ನಡೆಯುತ್ತಿರುವ ಈ ದಂಧೆಯನ್ನ ಶಿರಸಿ ನಗರ ಠಾಣೆಯ ಪೊಲೀಸರಾದರೂ ಹಿಡಿದು ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲೆಯಲ್ಲಿ ಸುನೀಲ ಯಾರು ಯಾರಿಗೆ ಸಪ್ಲಾಯಿ ಮಾಡುತ್ತಿದ್ದ ಎಂಬ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ.


Spread the love

Leave a Reply

Your email address will not be published. Required fields are marked *