ಮಗಳ ಉಳಿಸಲು ಹೋದ “ತಂದೆ-ತಾಯಿ” ಕೂಡ ಮಸಣಕ್ಕೆ: ಮುಗಿಲು ಮುಟ್ಟಿದ ಆಕ್ರಂದನ…

ಮಗಳನ್ನ ರಕ್ಷಣೆ ಮಾಡಲು ಹೋದ
ತಂದೆ-ತಾಯಿಯೂ ನೀರು ಪಾಲು
ಮಗಳಿಗಾಗಿ ಪ್ರಾಣ ಬಿಟ್ಟವರ ಮೃತ ದೇಹ ಪತ್ತೆ
ಮೈಸೂರು: ಆಕಸ್ಮಿಕವಾಗಿ ನಾಲೆಯೊಳಗೆ ಕಾಲು ಜಾರಿ ಬಿದ್ದ ಮಗಳನ್ನ ರಕ್ಷಣೆ ಮಾಡಲು ಹೋದ ತಂದೆ-ತಾಯಿಯೂ ನೀರು ಪಾಲಾದ ಘಟನೆ ಮೈಸೂರು ಜಿಲ್ಲೆ ಎಚ್‌ಡಿ ಕೋಟೆ ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಅಪ್ಪ ಮಹಮ್ಮದ್ ಕಪೀಲ್, ಅಮ್ಮ ಶಾವರ ಭಾನು, ಪುತ್ರಿ ಶಾಹೀರಾ ಭಾನು ಅವರಿಗಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಪುತ್ರಿಯನ್ನ ರಕ್ಷಿಸಲು ಹೋಗಿ ಅಪ್ಪ, ಅಮ್ಮ, ಪುತ್ರಿ ಮೂವರು ನಾಪತ್ತೆಯಾಗಿದ್ದಾರೆ. ಅಜ್ಜಿಯ ತಿಥಿ ಕಾರ್ಯಕ್ಕಾಗಿ ಸರಗೂರು ಗ್ರಾಮಕ್ಕೆ ಕಪೀಲ್ ಕುಟುಂಬ ಬಂದಿತ್ತು. ತಿಥಿ ಕಾರ್ಯ ಮುಗಿಸಿ ನುಗು ಜಲಾಶಯದ ಬಲದಂಡೆ ನಾಲೆಯಲ್ಲಿ ಕೈ ಕಾಲು ತೊಳೆಯಲು ಹೋದಾಗ ಘಟನೆ ಸಂಭವಿಸಿದೆ.
ಶಾಹೀರಾ ಭಾನು ಮೊದಲಿಗೆ ಕಾಲು ಜಾರಿ ಬಿದಿದ್ದು, ರಕ್ಷಣೆಗೆ ಹೋದ ಅಪ್ಪ, ಅಮ್ಮ ಮೂವರು ನೀರಿನಲ್ಲಿ ಮುಳುಗಿದ್ದಾರೆ.
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಭೇಟಿ, ಮೂವರ ಮೃತ ದೇಹ ಹೊರಕ್ಕ ತೆಗೆದ ಸಿಬ್ಬಂದಿ. ಮೃತರು ಬೆಂಗಳೂರು ಜಯನಗರ ನಿವಾಸಿಗಳಾಗಿದ್ದಾರೆ. ಸರಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.