ಯಾದವಾಡ ಗ್ರಾಪಂ ಮತ್ತೆ ಬಿಜೆಪಿ ತೆಕ್ಕೆಗೆ
1 min read
ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದು, ಪಂಚಾಯತಿಯನ್ನ ಮತ್ತೆ ತಮ್ಮ ಮಡಿಲಿಗೆ ತೆಗೆದುಕೊಂಡಿದ್ದಾರೆ.
ಲಕಮಾಪುರ ಗ್ರಾಮವನ್ನೊಳಗೊಂಡ ಯಾದವಾಡ ಗ್ರಾಮ ಪಂಚಾಯಿತಿ ಒಟ್ಟು ಸದಸ್ಯರ ಸಂಖ್ಯೆ ೧೪ ಹೊಂದಿದೆ. ಈ ಪೈಕಿ ೧೦ ಅಭ್ಯರ್ಥಿಗಳು ಬಿಜೆಪಿ ಬೆಂಬಲಿತರು ಪಂಚಾಯಿತಿಗೆ ಆಯ್ಕೆಗೊಂಡಿದ್ದಾರೆ.
ಗ್ರಾಪಂಗೆ ಆಯ್ಕೆಯಾದ ಬಿಜೆಪಿ ಬೆಂಬಲಿತ ಸದಸ್ಯರ ಹೆಸರು: ಲಕ್ಷ್ಮೀ ಮಹಾಂತೇಶ ಗಳಗಿ, ಪಾರ್ವತಿ ಗದಗಯ್ಯ ಹಿರೇಮಠ, ಶಿವಾನಂದ ಬೆಂಡಿಗೇರಿ, ಅಶೋಕ ಮಹಾದೇವಪ್ಪ ಹುಡೇದ, ಗಂಗಪ್ಪ ಭೀಮಪ್ಪ ಮುಮ್ಮಿಗಟ್ಟಿ, ಭೀಮವ್ವ ಚನ್ನಪ್ಪ ತೋಟನ್ನವರ, ಮಹಾಂತೇಶ ಮಡ್ಡೆಪ್ಪ ಬೋಳಶೆಟ್ಟಿ ಬಿಜೆಪಿಯಲ್ಲಿದ್ದವರು ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಮಂಜುನಾಥ ಬಂಡೆಪ್ಪನವರ ಹಾಗೂ ಮಕ್ತುಂಬಿ ಮಕ್ತುಮಸಾಬ ಹಾವಗಾರ ಮರಳಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಬಿಜೆಪಿ ಮತ್ತಷ್ಟು ಬಲಗೊಂಡಿದೆ. ಅದರಂತೆ ಎಸ್ಸಿ ಕೆಟಗೇರಿಯಲ್ಲಿ ಲಕ್ಷ್ಮೀ ಕರೆಪ್ಪ ಹುಲಮನಿ ಅವಿರೋಧವಾಗಿ ಆಯ್ಕೆಯಾಗಿ ಬಿಜೆಪಿ ಬೆಂಬಲಿಸುತ್ತಿದ್ದಾರೆ. ಹೀಗಾಗಿ ಬಿಜೆಪಿ ಸಂಖ್ಯಾಬಲ ಹೆಚ್ಚಾಗಿದೆ.