ಬಿದ್ದು ಎದ್ದು ಗೆದ್ದು ಬರುವೆನು: ವಿನಯ ಕುಲಕರ್ಣಿ ಏನೇನಂದ್ರು ಗೊತ್ತಾ..?
1 min read
ಧಾರವಾಡ: 2016 ಜೂನ್ 15ರ ಬೆಳಗಿನ ಜಾವ ಸಪ್ತಾಪುರದ ಉದಯ ಜಿಮ್ ನಲ್ಲಿ ಹತ್ಯೆಯಾದ ಆಗೀನ ಜಿಲ್ಲಾ ಪಂಚಾಯತಿ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ, ಭಾವನಾತ್ಮಕವಾಗಿ ಟ್ವೀಟ್ ಮಾಡುವ ಮೂಲಕ ತಮ್ಮಲ್ಲಿರುವ ಭರವಸೆಯನ್ನ ನಂಬಿಕೊಂಡಿದ್ದಾರೆ.
ಅವರದ್ದೇ ಟ್ವೀಟ್ ಅಕೌಂಟ್ ವೈರಲ್ ಆಗಿದ್ದು, ಅದರಲ್ಲಿ ಬರೆದಿದ್ದು ಹೀಗೆ..
ಬಿದ್ದು ಎದ್ದು ಗೆದ್ದು ಬರುವೆನು
ಸತ್ಯದ ತಳಹದಿಯಿಂದ ಎದ್ದು ಗೆದ್ದು ಬರುವೆನು
ಸುಳ್ಳು ಕುಣಿಯುತ್ತಿರುವಾಗ ಸತ್ಯ ಅಳುತ್ತದೆ. ಆದರೆ, ಸತ್ಯ ಎದ್ದು ನಿಂತಾಗ ಸುಳ್ಳು ಸತ್ತೆ ಹೋಗುತ್ತದೆ.
ಸತ್ಯಕ್ಕೆ ಸೋಲಿಲ್ಲ.
ನನ್ನೆಲ್ಲಾ ಪ್ರೀತಿ ಪಾತ್ರರಿಗೆ ನನ್ನ ಮೇಲಿಟ್ಟಿರುವ ನಂಬಿಕೆಗೆ ನಾನು ಚಿರಋಣಿ, ನಿಮ್ಮೆಲ್ಲರ ಹಾರೈಕೆ ಹಾಗೂ ನಂಬಿಕೆ ಎಂದು ಸುಳ್ಳಾಗುವುದಿಲ್ಲ..
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಈ ಟ್ವೀಟ್ ವೈರಲ್ ಆಗಿದ್ದು, ಅವರ ಅಭಿಮಾನಿಗಳಲ್ಲಿ ಮತ್ತಷ್ಟು ಹುಮ್ಮಸ್ಸು ಮೂಡಿದ್ದು, ವಿನಯ ಕುಲಕರ್ಣಿ ಬೇಗನೇ ಬಂಧನದಿಂದ ಮುಕ್ತವಾಗಲಿದ್ದಾರೆಂದು ಭರವಸೆ ಹೊಂದಿದ್ದಾರೆ.