ವಿನಯ ಕುಲಕರ್ಣಿ ಪಕ್ಷ ಸೇರ್ಪಡೆ: ವರಿಷ್ಠರೊಂದಿಗೆ ಮಾತನಾಡಿದ್ದೇನೆ- ಸಚಿವ ಪ್ರಲ್ಹಾದ ಜೋಶಿ
1 min read
ಹುಬ್ಬಳ್ಳಿ: ಮಾಜಿ ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ವಿನಯ ಕುಲಕರ್ಣಿ ಬಿಜೆಪಿ ಪಕ್ಷ ಸೇರ್ಪಡೆ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದ್ದು, ಈ ಬಗ್ಗೆ ತಮ್ಮ ವಿವರವಾದ ಹೇಳಿಕೆಯನ್ನ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿರುವ ಪ್ರಲ್ಹಾದ ಜೋಶಿ, ಈ ಕುರಿತು ಕೇವಲ ಮಾದ್ಯಮಗಳಲ್ಲಿ ಬಂದ ವರದಿ ನೋಡಿದ್ದೇನೆ. ರಾಜ್ಯ ಹಾಗೂ ಕೇಂದ್ರದ ಮುಂದೆ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ. ಈ ಕುರಿತು ಪಕ್ಷದಲ್ಲಿ ಯಾವುದೇ ರೀತಿ ಚರ್ಚೆ ಆಗಿಲ್ಲ. ಈ ಬಗ್ಗೆ ಪಕ್ಷದ ಯಾವ ನಾಯಕರನ್ನೂ ಯಾರೂ ಭೇಟಿ ಮಾಡಿಲ್ಲ ಎಂದು ಹೇಳಿದರು.
ನಾನು ಈ ಕುರಿತು ರಾಷ್ಟ್ರೀಯ ನಾಯಕರ ಜೊತೆ ಮಾತನಾಡಿದ್ದೇನೆ. ಆ ರೀತಿ ಯಾವುದೇ ಚರ್ಚೆಯಾಗಿಲ್ಲ ಎಂದ ಜೋಶಿಯವರು, ಸಿಎಂ ಬದಲಾವಣೆ ಕುರಿತು ಶಾಸಕ ಯತ್ನಾಳ್ ಹೇಳಿಕೆ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.