ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು- ಇಂದು ಡೇಟ್ ಫಿಕ್ಸ್..?
1 min read
ಧಾರವಾಡ: ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯವರ ಪರವಾಗಿ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆಯ ದಿನಾಂಕ ಇಂದು ನಿಗದಿಯಾಗುವ ಸಾಧ್ಯತೆಯಿದೆ.
ಹೈಕೋರ್ಟ್ ವಕೀಲರಾಗಿರುವ ಭರತಕುಮಾರ ಎನ್ನುವವರು ಜಾಮೀನಿಗಾಗಿ ಅರ್ಜಿಯನ್ನ ಸಲ್ಲಿಸಿದ್ದು, ಇದರ ವಿಚಾರಣೆಯ ದಿನಾಂಕ ಇಂದು ನಿಗದಿಯಾಗುವ ಸಂಭವವಿದ್ದು, ನಂತರ ಸಿಬಿಐಗೂ ಈ ಬಗ್ಗೆ ಮಾಹಿತಿ ರವಾನೆಯಾಗಲಿದೆ.
ನ್ಯಾಯಾಲಯದಲ್ಲಿ ಎಸ್ ಓಪಿ ಎಂದು ನಿಗದಿ ಮಾಡಿರುವುದರಿಂದ 24 ಗಂಟೆಗಳ ನಂತರ, ಅರ್ಜಿಯು ಬೋರ್ಡಗೆ ಬರಲಿದೆ. ಹೀಗಾಗಿ ಇಂದು ಅರ್ಜಿಯು ಬೋರ್ಡಗೆ ಬಂದರೇ, ಇಂದೇ ಅರ್ಜಿಯ ವಿಚಾರಣೆಯ ದಿನಾಂಕ ನಿಗದಿಯಾಗುವ ಸಾಧ್ಯತೆಗಳಿವೆ.
ಕಳೆದ ಗುರುವಾರ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ, ಸಿಬಿಐ ಮೂರು ದಿನ ಕಸ್ಟಡಿ ಪಡೆದಿತ್ತು. ನಂತರ ಮತ್ತೆ ಅವರಿಗೆ 14 ದಿನದ ನ್ಯಾಯಾಂಗ ಬಂಧನವನ್ನ ನ್ಯಾಯಾಲಯ ನೀಡಿದ್ದನ್ನ ಇಲ್ಲಿ ಸ್ಮರಿಸಬಹುದು.