ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ವಿಚಾರಣೆ ಮತ್ತೆ ನಾಳೆಗೆ ಮುಂದೂಡಿಕೆ
1 min read
ಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯವರ ಜಾಮೀನು ಅರ್ಜಿಯ ವಿಚಾರಣೆಯನ್ನ ಮತ್ತೆ ನಾಳಗೆ ಮುಂದೂಡಲಾಗಿದೆ.
ಧಾರವಾಡ ಹೈಕೋರ್ಟನಲ್ಲಿ ನಡೆದ ಜಾಮೀನು ಅರ್ಜಿಯ ವಿಚಾರಣೆಯ ಸಂಬಂಧವಾಗಿ ವಿನಯ ಕುಲಕರ್ಣಿಯವರ ಪರವಾಗಿ ಶಶಿಕಿರಣ ಶೆಟ್ಟಿಯವರು ವಾದ ಮಂಡಿಸಿದರು. ಇದೇ ಸಮಯದಲ್ಲಿ ಸಿಬಿಐ ಪರವಾಗಿ ಸಾಲ್ವಿಸೇಟರ್ ಜನರಲ್ ಎಸ್.ವಿ.ರಾಜು ಅವರು ವಾದವನ್ನ ಮಂಡಿಸಿದರು.
ಎರಡು ಕಡೆಯ ವಾದಗಳ ಜೊತೆಗೆ ಮಧ್ಯಾಹ್ನದ ನಂತರ ಮತ್ತೆ ಎಸ್.ವಿ.ರಾಜು ಅವರ ವಾದವನ್ನ ಮಂಡಿಸಬೇಕಾಗಿತ್ತು. ಹಾಗಾಗಿಯೇ ನಾಳೆಗೆ ಮತ್ತೆ ವೀಡಿಯೋ ಕಾನ್ಸರೆನ್ಸ್ ಮೂಲಕ ವಾದವನ್ನ ಮಂಡನೆ ಮಾಡಲಿದ್ದಾರೆ.
ಹೈಕೋರ್ಟ ನ್ಯಾಯಾಧೀಶ ನಟರಾಜನ್ ಸಮ್ಮುಖದಲ್ಲಿ ವಿನಯ ಕುಲಕರ್ಣಿಯವರ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದೆ. ಇಂದು ಎರಡು ಕಡೆಯ ವಾದವನ್ನ ಕೇಳಿ, ನಾಳೆಗೆ ಬಾಕಿಯಿರುವ ವಾದವನ್ನ ನ್ಯಾಯಾಧೀಶರು ಆಲಿಸಲಿದ್ದಾರೆ.