ಮಾಜಿ ಸಚಿವ ವರ್ತೂರು ಪ್ರಕಾಶ ಅಪಹರಣ, ಹಲ್ಲೆ: ತಪ್ಪಿಸಿಕೊಂಡು ಬಂದ್ರಾ ವರ್ತೂರು..!
1 min read
ಕೋಲಾರ: ತೋಟದ ಮನೆಯಿಂದ ಬೆಂಗಳೂರಿಗೆ ಹೊರಡುವ ವೇಳೆಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ ಅವರನ್ನ ಎಂಟಕ್ಕೂ ಹೆಚ್ಚು ಜನರು ಹಲ್ಲೆ ಮಾಡಿ ಅಪಹರಣ ಮಾಡಿದ್ದರೆಂದು ಸ್ವತಃ ಮಾಜಿ ಸಚಿವರೇ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ವರ್ತೂರು ಪ್ರಕಾಶ ಮೂರು ದಿನದ ಹಿಂದೆ ಅಪಹರಣ ಮಾಡಿ 20 ಕೋಟಿಗೆ ಬೇಡಿಕೆಯಿಟ್ಟಿದ್ದರು ಎಂದು ಹೇಳಲಾಗಿದೆ. ತಮ್ಮನ್ನ ಮೂರು ದಿನದವರೆಗೆ ಅಜ್ಞಾತ ಸ್ಥಳದಲ್ಲಿಟ್ಟು ತೊಂದರೆ ಕೊಡಲಾಗಿದೆ ಎಂದು ದೂರು ನೀಡಲಾಗಿದೆ.
ಎಂಟು ಜನರಿದ್ದ ಅಪಹರಣ ತಂಡವನ್ನ ತಪ್ಪಿಸಿಕೊಂಡು ಬಂದು ದೂರು ನೀಡುತ್ತಿರುವುದಾಗಿ ವರ್ತೂರು ಪ್ರಕಾಶ ಹೇಳಿಕೊಂಡಿದ್ದು, ಜೊತೆಗೆ ತಮ್ಮ ಪುತ್ರನನ್ನ ಕರೆದುಕೊಂಡು ಬಂದಿದ್ದಾರೆ. ಈ ಬಗ್ಗೆ ನಿಖರವಾದ ಮಾಹಿತಿಯನ್ನ ನೀಡುತ್ತಿದ್ದಾರೆ.
ರಾಜ್ಯದಲ್ಲಿ ಮಾಜಿ ಸಚಿವರಿಗೂ ರಕ್ಷಣೆ ಇಲ್ಲವೇ ಎಂಬ ಪ್ರಶ್ನೆ ಮೂಡಿದ್ದು, ಅಪಹರಣಕಾರರ ಉದ್ದೇಶ ಕೇವಲ ಹಣದ್ದಷ್ಟೇ ಇತ್ತಾ ಅಥವಾ ಬೇರೆ ಏನಾದರೂ ಇತ್ತಾ ಎಂಬುದನ್ನ ತಿಳಿಯುವ ಪ್ರಯತ್ನವನ್ನ ಪೊಲೀಸರು ತಿಳಿದುಕೊಳ್ಳುತ್ತಿದ್ದು, ಈ ಘಟನೆ ರಾಜಕಾರಣಿಗಳಲ್ಲಿ ಆತಂಕ ಮೂಡಿಸಿದೆ.