ಟಿವಿಎಸ್ ಎಕ್ಸಲ್ ಪ್ರಿಯ ಕಳ್ಳ: 28 ಗಾಡಿಗಳ ಸಮೇತ ಸಿಕ್ಕಿ ಬಿದ್ದು: ಖರೀದಿಸುತ್ತಿದ್ದವರನ್ನೂ ಪೊಲೀಸರಿಗೆ ತೋರಿಸಿದ..!
1 min read
ಹುಬ್ಬಳ್ಳಿ: ಟಿವಿಎಸ್ ಎಕ್ಸಲ್ ದ್ವಿಚಕ್ರ ವಾಹನಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಕಳ್ಳನನ್ನ ಹಿಡಿದ ಪೊಲೀಸರು ಆತನಿಂದ 28 ದ್ವಿಚಕ್ರವಾಹನಗಳನ್ನ ವಶಪಡಿಸಿಕೊಂಡು, ಕಳ್ಳತನ ಮಾಡುತ್ತಿದ್ದ ಬೈಕುಗಳನ್ನ ಖರೀದಿಸುತ್ತಿದ್ದ ಇಬ್ಬರನ್ನೂ ಬಂಧನ ಮಾಡುವಲ್ಲಿ ವಿದ್ಯಾನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಳೇಹುಬ್ಬಳ್ಳಿ ಪಡದಯ್ಯನಹಕ್ಕಲದ ನಿವಾಸಿಯಾಗಿದ್ದ ನಾಗರಾಜ ಅಲಿಯಾಸ್ ನಾಗ್ಯಾ ಭೀಮಪ್ಪ ಅಂಬಿಗೇರ ಎಂಬಾತನೇ ಸಂಶಯಾಸ್ಪದವಾಗಿ ಅಲೆಯುತ್ತಿದ್ದಾಗ, ಪೊಲೀಸರು ಸಂಶಯ ಬಂದು ವಿಚಾರಣೆ ಮಾಡಿದಾಗ, ಕಳ್ಳತನದ ಮರ್ಮ ಹೊರಬಿದ್ದಿದೆ.
ಈತನ ಕದ್ದು ಬೈಕುಗಳನ್ನ ಖರೀದಿ ಮಾಡುತ್ತಿದ್ದ ಹಳೇಹುಬ್ಬಳ್ಳಿ ಮೆಹಬೂಬನಗರದ ಮೆಹಬೂಬಸಾಬ ಮೌಲಾಸಾಬ ಅತ್ತಾರ ಮತ್ತು ಸದಾಶಿವನಗರ ಬಾಣತಿಕಟ್ಟಿಯ ರಸೂಲ ರಫೀಕ ಕಿತ್ತೂರ ಎಂಬುವವರನ್ನ ಬಂಧನ ಮಾಡಲಾಗಿದೆ. ಬಂಧಿತರಿಂದ 25 ಟಿವಿಎಸ್ ಎಕ್ಸಲ್ ಹಾಗೂ ಸ್ಪೈಂಡರ್ ಪ್ಲಸ್ ಬೈಕುಗಳನ್ನ ವಶಕ್ಕೆ ಪಡೆಯಲಾಗಿದೆ. ಇವುಗಳ ಅಂದಾಜು ಮೌಲ್ಯ 870000 ಎಂದು ಗುರುತಿಸಲಾಗಿದೆ.
ಪೊಲೀಸ್ ಕಮೀಷನರ ಲಾಬೂರಾಮ್ ಹಾಗೂ ಎಸಿಪಿ ವಿನೋದ ಮುಕ್ತೆದಾರ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಆನಂದ ಒನಕುದ್ರೆ, ಪಿಎಸ್ಐ ಶಿವಾನಂದ ಬನ್ನಿಕೊಪ್ಪ, ಮಹಿಳಾ ಎಎಸ್ಐ ಆರ್.ಸಿ.ಡೋಣಿ, ಸಿಬ್ಬಂದಿಗಳಾದ ಬಿ.ಕೆ.ಕೊಟಬಾಗಿ, ಟಿ.ಎಸ್.ಗುಡಗೂರ, ಬಿ.ಎ.ಕಿತ್ತೂರ, ವೈ.ಎಂ.ಶೆಂಡ್ಗೆ, ಎಸ್.ಬಿ.ಯಳವತ್ತಿ, ಎಸ್.ಜಿ.ಹೊಸಮನಿ, ಸುನೀಲ ಲಮಾಣಿ, ಮಂಜುನಾಥ ಏಣಗಿ, ಎಸ್.ಎಚ್.ತಹಶೀಲ್ದಾರ, ರಮೇಶ ಹಲ್ಲೆ, ಬಿ.ಎಸ್.ಹಚ್ಚಡದ, ರುದ್ರಪ್ಪ ಹೊರಟ್ಟಿ ಹಾಗೂ ಪುಷ್ಟಾ ಶಾನವಾಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಪೊಲೀಸರ ಕಾರ್ಯಾಚರಣೆಯ ಬಗ್ಗೆ ಪೊಲೀಸ್ ಆಯುಕ್ತ ಲಾಬೂರಾಮ್ ಶ್ಲಾಘನೆವ್ಯಕ್ತಪಡಿಸಿ, ಹತ್ತು ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿದರು.