ಧಾರವಾಡದಲ್ಲಿ ರೇಲ್ವೆ ಉದ್ಯೋಗಿ ಮನೆಯಲ್ಲಿ ಲಕ್ಷಾಂತರ ರೂ. ಚಿನ್ನಾಭರಣ ಕಳ್ಳತನ
1 min read
ಧಾರವಾಡ: ಮನೆಯಲ್ಲಿ ಯಾರೂ ಇಲ್ಲದ್ದನ್ನ ಗಮನಿಸಿ ಬಾಗಿಲನ್ನ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿರುವ ಘಟನೆ ಕರ್ನಾಟಕ ವಿಶ್ವವಿದ್ಯಾಲಯದ ರಸ್ತೆಯಲ್ಲಿರು ಅಪಾರ್ಟಮೆಂಟವೊಂದರಲ್ಲಿ ನಡೆದಿದೆ.
ರೇಲ್ವೆ ಅಧಿಕಾರಿಯಾಗಿರುವ ರಂಜನ್ ಎಂಬುವವರಿಗೆ ಸೇರಿದ ಮನೆಯಲ್ಲಿ ನಡೆದಿರುವ ಕಳ್ಳತನದಲ್ಲಿ ಐದೂವರೆ ಲಕ್ಷ ರೂಪಾಯಿ ಮೌಲ್ಯದ 110 ಗ್ರಾಂ ಚಿನ್ನಾಭರಣವನ್ನ ದೋಚಿಕೊಂಡು ಹೋಗಲಾಗಿದೆ ಎಂದು ಹೇಳಲಾಗಿದೆ.
ಕಳೆದ ನಾಲ್ಕು ದಿನದ ಹಿಂದೆ ಪರವೂರಿಗೆ ಹೋಗಿದ್ದ ರಂಜನ್ ಅವರು ಮನೆಗೆ ಮರಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಉಪನಗರ ಠಾಣೆಯಲ್ಲಿ ದೂರು ನೀಡಿದ್ದು, ಶ್ವಾನದಳದ ಸಮೇತ ಪೊಲೀಸರು ಹೋಗಿ ಪರಿಶೀಲನೆ ನಡೆಸಿದ್ದಾರೆ.
ಅಪಾರ್ಟಮೆಂಟಿನಲ್ಲಿ ಸೇಪ್ಟಿ ಹೆಚ್ಚು ಎನ್ನುವವರಿಗೂ ಆತಂಕ ಮೂಡಿಸುವ ಘಟನೆ ಇದಾಗಿದ್ದು, ಪೊಲೀಸರು ಆದಷ್ಟು ಬೇಗನೇ ಈ ಪ್ರಕರಣವನ್ನ ಭೇದಿಸಬೇಕಿದೆ. ಇಲ್ಲದಿದ್ದರೇ ಅಪಾರ್ಟಮೆಂಟ್ ನಿವಾಸಿಗಳ ಆತಂಕ ದೂರಾಗಲ್ಲ.