ಶಿಕ್ಷಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ: ಇಂದಿನಿಂದ ನೂತನ ಗ್ರಾಪಂ ಸದಸ್ಯ

ಧಾರವಾಡ: ರಾಜಕೀಯದ ಮೋಹವೇ ಅಂತಹದು. ಇಲ್ಲಿ ಯಾರು ಯಾವಾಗ ಯಾವ ಜಾಗದಲ್ಲಿ ಬಂದು ಕೂಡುತ್ತಾರೋ ಗೊತ್ತಿಲ್ಲ. ಹೀಗಾಗಿಯೇ ರಾಜಕೀಯ ಅನ್ನೋದು ಒಂದು ರೀತಿಯ ಅದೃಷ್ಟದಾಟ ಎನ್ನಬಹುದು.
ಹೌದು.. ನಿವೃತ್ತಿಯಾದ ನಂತರ ಚೆಂದಾಗಿ ಜೀವನ ನಡೆಸಬೇಕು ಎಂದು ಕನಸು ಕಾಣುವವರ ನಡುವೆ ಶಿಕ್ಷಕರಾಗಿದ್ದ ಸಿ.ಎಂ.ಕಿತ್ತೂರ ವಿಭಿನ್ನವಾಗಿ ನಿಲ್ಲುತ್ತಾರೆ. ಅವರೀಗ ಗ್ರಾಮ ಪಂಚಾಯತಿ ಚುನಾವಣೆಗೆ ನಿಂತು ಗೆದ್ದು ಬಂದಿದ್ದಾರೆ.
ಧಾರವಾಡ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನಿವೃತ್ತ ಶಿಕ್ಷಕ ಸಿ.ಎಂ. ಕಿತ್ತೂರ್ ಧಾರವಾಡ ತಾಲೂಕಿನ ಹಂಗರಕಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದಿದ್ದಾರೆ.
ಶಿಕ್ಷಕರಿದ್ದಾಗಲೂ ಉತ್ಸಾಹದಿಂದ ಇರುತ್ತಿದ್ದ ಕಿತ್ತೂರು ಅವರನ್ನ ಗುರುತಿಸಿದ್ದು ಹಾಲಿ ಶಾಸಕ ಅಮೃತ ದೇಸಾಯಿ. ಗ್ರಾಮ ಪಂಚಾಯತಿಯಲ್ಲಿ ವಿದ್ಯಾವಂತರಿಗೆ ಅವಕಾಶವನ್ನ ನೀಡಲು ಮುಂದಾಗಿರುವುದನ್ನ ಈ ಪ್ರಕರಣ ಎತ್ತಿ ತೋರಿಸುವಂತಿದೆ.