ಧಾರವಾಡ ಜಿಲ್ಲೆಗೆ ರಾಜೀವಸಿಂಗ್ ಹಲವಾಯಿ ಪ್ರಧಾನ ಕಾರ್ಯದರ್ಶಿ: ಪ್ರಾಥಮಿಕ ಸಂಘದವರಿಂದ ಸತ್ಕಾರ
1 min read
ಧಾರವಾಡ: ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾದ ಧಾರವಾಡದ ರಾಜೀವಸಿಂಗ ಹಲವಾಯಿ ಅವರನ್ನು ಸಂಘದಿಂದ ಸತ್ಕರಿಸಲಾಯಿತು.
ರಾಜ್ಯಾದ್ಯಕ್ಷ ಅಶೋಕ ಸಜ್ಜನ, ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಧಾರವಾಡ ತಾಲೂಕಿನ ಕಾರ್ಯಾದ್ಯಕ್ಷ ಜಿ ಬಿ ಶೆಟ್ಟರ್, ಸದಸ್ಯ ಎಲ್.ಐ. ಲಕ್ಕಮ್ಮನವರ, ತಾಲೂಕು ಕೋಶಾಧ್ಯಕ್ಷ ಎಸ್.ಎ. ಜಾಧವ, ಹಿರಿಯರಾದ ಎಂ.ಆರ್. ಪಾಲ್ತಿ, ಧಾರವಾಡ ಜಿಲ್ಲಾಧ್ಯಕ್ಷ ಅಕ್ಬರಲಿ ಸೋಲಾಪುರ ಇವರ ಸಮ್ಮುಖದಲ್ಲಿ ಸತ್ಕರಿಸಲಾಯಿತು.
ಹುದ್ದೆ ಸ್ವೀಕರಿಸಿದ ರಾಜೀವಸಿಂಗ ಹಲವಾಯಿ, ಬಿಡುವಿನ ವೇಳೆಯಲ್ಲಿ ಗ್ರಾಮೀಣ ಶಿಕ್ಷಕರ ಸೇವೆಗೆ ನಾನು ಸದಾ ಸಿದ್ದ ಎಂದರು. ಧಾರವಾಡ ತಾಲೂಕು ಕಾರ್ಯಾಧ್ಯಕ್ಷ ಜಿ.ಬಿ. ಶೆಟ್ಟರ ಮಾತನಾಡಿ, ಗ್ರಾಮೀಣ ಶಿಕ್ಷಕರ ಸಂಘ ವರ್ಗಾವಣೆ ಸಮಸ್ಯೆ ಸೇರಿದಂತೆ ಗ್ರಾಮೀಣ ಶಿಕ್ಷಕರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ, ಮುಖ್ಯೋಪಾಧ್ಯಾಯರ ಬಡ್ತಿ ವಿಚಾರ, ಹಿಂದಿ ಶಿಕ್ಷಕರ ಸಮಸ್ಯೆ, ಜಿ ಪಿ ಟಿ ಶಿಕ್ಷಕರ ಸಮಸ್ಯೆ ಸೇರಿದಂತೆ ಹಳ್ಳಿಯ ಶಿಕ್ಷಕರಿಗೆ ಐದು ಸಾವಿರ ಗ್ರಾಮೀಣ ಭತ್ಯೆ ಸೇರಿದಂತೆ ಅನೇಕ ಕೆಲಸಗಳನ್ನು ಸಂಘ ಮಾಡಿದೆ, ಮಾಡುತ್ತಿದೆ ಎಂದರು.