ಶಾಲೆ ಆರಂಭಕ್ಕೆ ಕ್ಷಣಗಣನೆ: 300 ಶಿಕ್ಷಕರಿಗೆ ಕೊರೋನಾ ಟೆಸ್ಟ್- ಇಂದು ವರದಿ ಸಾಧ್ಯತೆ
1 min read
ಗದಗ: ಜನೇವರಿ ಒಂದರಿಂದ ಶಾಲೆಯಲ್ಲಿಯೇ ವಿದ್ಯಾಗಮ ಕಾರ್ಯಕ್ರಮ ಆರಂಭಗೊಳ್ಳುತ್ತಿರುವ ಬೆನ್ನಲ್ಲೇ ಶಿಕ್ಷಕರು ಕೋವಿಡ್-19 ಪರೀಕ್ಷೆಗೆ ಒಳಪಡುತ್ತಿದ್ದು, ಸರದಿ ಸಾಲಿನಲ್ಲಿ ನಿಂತು ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ.
ಶಾಲೆಯ ಆರಂಭಕ್ಕೆ ಇನ್ನೂ ಮೂರೇ ದಿನ ಬಾಕಿಯಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಕೋವಿಡ್-19 ಕಡ್ಡಾಯವಾಗಿದೆ. ಹೀಗಾಗಿ ಶಿಕ್ಷಕರು ಗಜೇಂದ್ರಗಡದ ಸರಕಾರಿ ಆಸ್ಪತ್ರೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಕೊರೋನಾ ಪರೀಕ್ಷೆ ಮಾಡಿಸಿಕೊಂಡರು.
ಸರಕಾರದ ಆದೇಶದ ಹಿನ್ನೆಲೆಯಲ್ಲಿ ಜನವೇರಿ 1ರಿಂದ 6ನೇ ತರಗತಿಯಿಂದ 9ನೇ ತರಗತಿವರೆಗೆ ತರಗತಿಗಳು ವಿದ್ಯಾಗಮ ಕಾರ್ಯಕ್ರಮದಲ್ಲಿ ಆರಂಭವಾಗಲಿವೆ. ಇದರ ಪರಿಣಾಮ ನೋಡಿಕೊಂಡು ಸಂಕ್ರಾಂತಿ ವೇಳೆಗೆ ಪ್ರಾಥಮಿಕ ಶಾಲೆಯನ್ನೂ ಆರಂಭಿಸುವ ಯೋಚನೆಯನ್ನ ಸರಕಾರ ಮಾಡಿದ್ದು, ಶಿಕ್ಷಕರು ಎಲ್ಲ ರೀತಿಯಿಂದಲೂ ಸಿದ್ಧಗೊಳ್ಳುತ್ತಿದ್ದಾರೆ.
ಗಜೇಂದ್ರಗಡದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂರಾರೂ ಶಿಕ್ಷಕರು ಕೋವಿಡ್-19 ಟೆಸ್ಟಗೆ ಒಳಗಾದರು. ಇವರೆಲ್ಲರ ವರದಿಯೂ ನಾಳೆ ಸಂಜೆಯವರೆಗೆ ತಿಳಿಯಲಿದೆ.
ಶಾಲೆಯಲ್ಲಿರುವ ಅಡುಗೆ ಸಿಬ್ಬಂದಿಗಳಿಗೂ ಕೊರೋನಾ ಟೆಸ್ಟ್ ಮಾಡಿಸಲಾಗುತ್ತಿದೆ. ಇದರ ಜೊತೆಗೆ ಇನ್ನುಳಿದ ಸಿಬ್ಬಂದಿಗಳಿಗೂ ಕೊರೋನಾ ಪರೀಕ್ಷೆ ನಡೆಯುತ್ತಿದೆ.