Posts Slider

Karnataka Voice

Latest Kannada News

ಶಿಕ್ಷಕರ “ಹೆಚ್ಚುವರಿ” ಸ್ಥಗಿತಗೊಂಡಿದ್ದು “ಸಿಎಂ” ಆಸಕ್ತಿಯಿಂದ ಮಾತ್ರ…!!!

1 min read
Spread the love

ಬೆಂಗಳೂರು: ರಾಜ್ಯದ ಶಿಕ್ಷಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಹೆಚ್ಚುವರಿ ವರ್ಗಾವಣೆ ಪ್ರಕ್ರಿಯೆಗೆ ಕೊನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಕಡಿವಾಣ ಹಾಕಿ, ಸಾವಿರಾರೂ ಶಿಕ್ಷಕರ ನೆಮ್ಮದಿಗೆ ಕಾರಣವಾಗಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕಳೆದ ಎರಡು ದಿನಗಳ ಹಿಂದೆ ಆಪ್ತ ವಲಯದ ಒಬ್ಬರು ದೈಹಿಕ ಶಿಕ್ಷಣ ಶಿಕ್ಷಕರಿಗೆ ಆಗುತ್ತಿರುವ ಪ್ರಮಾದದ ಬಗ್ಗೆ ಸಂಪೂರ್ಣವಾಗಿ ಮನವರಿಕೆ ಮಾಡಿಕೊಟ್ಟಿದ್ದರು. ಹಾಗಾಗಿಯೇ ಇಡೀ ಪ್ರಕ್ರಿಯೆಗೆ ಫುಲ್‌ಸ್ಟಾಪ್ ಹಾಕಿದ್ದಾರೆ. ಇದೇ ಕಾರಣದಿಂದ ಶಿಕ್ಷಣ ಸಚಿವರು ಆದೇಶ ಹೊರಡಿಸಿದ್ದಾರೆ.

ದೈಹಿಕ ಶಿಕ್ಷಣ ಶಿಕ್ಷಕರಿಗೆ ಯಾವುದೇ ರೀತಿಯ ಸಹಕಾರ ನೀಡದೇ ಹೆಚ್ಚುವರಿ ಪಟ್ಟಿಯನ್ನ ಬಿಡುಗಡೆ ಮಾಡಲಾಗಿತ್ತು. ಅಷ್ಟೇ ಅಲ್ಲ, ಸಭಾಪತಿ ಬಸವರಾಜ ಹೊರಟ್ಟಿಯವರು ಹೇಳಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಹೀಗಾಗಿಯೇ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಸಂಘ ಗ್ರೇಡ್-2 ನಿರಂತರವಾಗಿ ಪ್ರಯತ್ನ ಮಾಡಿತ್ತು. ಇದರ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿದ್ದರಿಂದ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಇದನ್ನ ಹೊರತುಪಡಿಸಿ ಕೆಲವರು “ನಡು ರಸ್ತೆಯಲ್ಲಿ” ನಿಂತು ಇದು ನಮ್ಮ ಪ್ರಯತ್ನ ಎನ್ನುತ್ತಿದ್ದಾರೆ. ಇಂಥವರು ಸಿಎಂ ಎದುರಿಗೆ ಕಂಡಾಗ ಸರಿಯಾದ ಉತ್ತರ ಅಲ್ಲಿಂದಲೇ ಬರಲಿದೆ.


Spread the love

Leave a Reply

Your email address will not be published. Required fields are marked *