ಶಿಕ್ಷಕರ ವರ್ಗಾವಣೆ ಆರಂಭಿಸಿ- ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ವಿನೂತನ ಮನವಿ
ಧಾರವಾಡ: ಕಳೆದ ಐದು ವರ್ಷದಲ್ಲಿ ಒಂದೇ ಒಂದು ಬಾರಿ ಶಿಕ್ಷಕರ ವರ್ಗಾವಣೆ ನಡೆದಿದ್ದು, ಇದರಿಂದ ಬಹುಪಾಲ ಶಿಕ್ಷಕರು ಸಂಕಷ್ಟದಲ್ಲಿದ್ದು, ತಕ್ಷಣವೇ ಶಿಕ್ಷಕರ ವರ್ಗಾವಣೆಯನ್ನ ಆರಂಭಿಸುವಂತೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ವಿನೂತನವಾಗಿ ಮನವಿ ಮಾಡಿಕೊಂಡಿದ್ದಾರೆ.
ವಿಧಾನಪರಿಷತ್ ಚುನಾವಣೆ ಮತ್ತು ಗ್ರಾಮ ಪಂಚಾಯತಿ ಚುನಾವಣೆಯ ಸಮಯದಲ್ಲೂ ವರ್ಗಾವಣೆಗೆ ತೊಂದರೆಯಾಗದಂತೆ ಚುನಾವಣೆ ಆಯೋಗದಿಂದ ಪರವಾನಿಗೆ ಪಡೆದುಕೊಳ್ಳಿ ಎಂದು ಸಂಘವೂ ಈ ಹಿಂದೆ ಮನವಿ ಮಾಡಿಕೊಂಡ ಬೆನ್ನಲ್ಲೇ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಮಳೆಯಲ್ಲಿ ನಿಂತವರ ಹಾಗೇ ಮನವಿ ಪತ್ರ ಹಿಡಿದುಕೊಂಡು ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದಾರೆ.
ಶಿಕ್ಷಕರ ಜೀವನ ಮಳೆಯಲ್ಲಿ ನೆನೆಯದ ಹಾಗೇ ನೋಡಿಕೊಳ್ಳುವ ಜವಾಬ್ದಾರಿಯಿದೆ. ರಾಜ್ಯದಲ್ಲಿ ಮಳೆಯಿಂದಲೂ ಅನೇಕ ತೊಂದರೆಗಳಾಗಿವೆ. ಹಲವು ಶಿಕ್ಷಕ ಕುಟುಂಬಗಳು ವರ್ಗಾವಣೆ ಆರಂಭಿಸುವುದರಿಂದ ನೆಮ್ಮದಿಯಾಗಿ ಜೀವನ ಸಾಗಿಸುತ್ತಾರೆ ಎಂಬ ಸಂದೇಶವನ್ನ ಸಾರುವ ವೀಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯ ಸರಕಾರ ಆದಷ್ಟು ಬೇಗನೇ ಶಿಕ್ಷಕರ ವರ್ಗಾವಣೆಯನ್ನ ಆರಂಭಿಸುವ ಮನವಿಗೆ ಸ್ಪಂಧಿಸಬೇಕಿದೆಯಷ್ಟೇ..