ಗ್ರಾಮೀಣ ಶಿಕ್ಷಕರಿಂದ ಕೊರೋನಾ ಸೇನಾನಿಗಳಿಗೆ ಶಿಕ್ಷಕರಿಂದ ಸನ್ಮಾನ
1 min read
ಹುಬ್ಬಳ್ಳಿ: ತಾಲೂಕಿನ ಹೆಬಸೂರ ಗ್ರಾಮದಲ್ಲಿ ಕೊರೋನಾ ಸೇನಾನಿಗಳನ್ನ ಸನ್ಮಾನ ಮಾಡಲಾಯಿತು. ನಿರಂತರವಾಗಿ ಸೇವೆ ಕೊಡುತ್ತಿರುವ ಹಲವು ಇಲಾಖೆಗಳ ಸಿಬ್ಬಂದಿಗಳಿಗೆ ಆತ್ಮೀಯವಾಗಿ ಸತ್ಕಾರ ನಡೆಯಿತು.
ಹೆಬಸೂರ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಸಿ.ಆರ್.ಸಿ.ಬ್ಯಾಹಟ್ಟಿ, ಸ್ಥಳೀಯ ಎಲ್ಲ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಹೆಬಸೂರ ಕಿರೇಸೂರ ಗ್ರಾಮಗಳ ಶಾಲಾ ಶಿಕ್ಷಕಿಯರಿಗೆ, ಅಡುಗೆ ಸಹಾಯಕಿಯರಿಗೆ ಬೋಧಕೇತರ ಸಿಬ್ಬಂದಿಯವರಿಗೆ ಶಿರಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ತಪಾಸಣಾಧಿಕಾರಿ ಪ್ರಕಾಶ ಬಾರ್ಕೇರ , ಅನಿಲ ಹಾಗೂ ರಾಮಚಂದ್ರ ಅವರು ಸರ್ಕಾರದ ನಿಯಮಾವಳಿ ಪ್ರಕಾರ ಕೊರೋನಾ ಸೋಂಕು ಪರೀಕ್ಷೆಗಾಗಿ ಗಂಟಲು ದ್ರವ ಸಂಗ್ರಹಿಸಿಕೊಂಡರು.
ಇದೇ ಸಂದರ್ಭದಲ್ಲಿ ಕ.ಸ.ಗ್ರಾ.ಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕನ್ನಡ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಶಾಲೆಗಳು ಸಂಯುಕ್ತವಾಗಿ ಕೊರೋನಾ ಸೇನಾನಿಗಳನ್ನು ಸತ್ಕರಿಸಿ ಗೌರವಿಸಲಾಯಿತು. ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಮು.ಶಿ. ಎಸ್.ಎಲ್.ಬೆಟಗೇರಿ, ವಿದ್ಯಾ ಲಕ್ಷ್ಮೇಶ್ವರ, ರವಿ ಕೊಣ್ಣೂರ, ರಮಾನಾಥ ನಾಯ್ಕ, ಪಿ.ಬಿ.ಗಿರಡ್ಡಿ ಹಾಗೂ ಎಲ್ಲಾ ಗುರುವೃಂದ ಉಪಸ್ಥಿತರಿದ್ದರು.