Posts Slider

Karnataka Voice

Latest Kannada News

ಶಿಕ್ಷಕರ ವರ್ಗಾವಣೆ, ಅರ್ಜಿ ಸಲ್ಲಿಸೋ ದಿನಾಂಕ ವಿಸ್ತರಿಸಿ: ಸಚಿವ, ಆಯುಕ್ತರಿಗೆ ಪತ್ರ

1 min read
Spread the love

ಧಾರವಾಡ: 2020-21ರ ಶಿಕ್ಷಕರ ವರ್ಗಾವಣೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನ ವಿಸ್ತರಣೆ ಮಾಡಬೇಕೆಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಹಾಗೂ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.

ವಿನಂತಿಯ ಪತ್ರದಲ್ಲಿ ಏನೇನು ಬೇಡಿಕೆಗಳಿವೆ ಎಂಬುದು ಇಲ್ಲಿ ವಿವರವಾಗಿದೆ ನೋಡಿ..

ಗೆ,

ಮಾನ್ಯ ಆಯುಕ್ತರು

ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು 01

ವಿಷಯ:- 2020-21 ರ  ಶಿಕ್ಷಕರ ವರ್ಗಾವಣೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ ಮತ್ತು ನಮ್ಮ ಸಂಘದ ಈ ಕೆಳಕಂಡ ಅಂಶಗಳನ್ನು ಪರಿಗಣಿಸುವಂತೆ ಮನವಿ

ಮಾನ್ಯರೆ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ರಿ ಹುಬ್ಬಳ್ಳಿ ಯ ರಾಜ್ಯಾಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಈ ಮೂಲಕ ತಮ್ಮಲ್ಲಿ ವಿನಂತಿಸುವುದೇನೆಂದರೆ

ವರ್ಗಾವಣೆ ಅರ್ಜಿಗಳಲ್ಲಿ ತಪ್ಪಾದ ಅಂಶಗಳನ್ನು ತಿದ್ದುಪಡಿ ಮಾಡಲು ತಾವುಗಳು ಅವಕಾಶ ಕಲ್ಪಿಸಿರುವುದನ್ನು ನಮ್ಮ ಸಂಘವು ಸ್ವಾಗತಿಸುತ್ತದೆ ಆದರೆ ಇದಕ್ಕಾಗಿ ಸ್ವಲ್ಪ ಕಾಲಾವಕಾಶ ಅಗತ್ಯವಿದ್ದು ನಾಲ್ಕನೇ ಶನಿವಾರ ಹಾಗೂ ಭಾನುವಾರ ಬಂದಿರುವುದರಿಂದ ದಯಮಾಡಿ ಅರ್ಜಿ ಸಲ್ಲಿಸಲು ನೀಡಿರುವ ಕಾಲಾವಕಾಶವನ್ನು ಎರಡು ದಿನ ಹೆಚ್ಚಿಸಲು ಸಮಸ್ತ ಗುರುಬಳಗದ ಪರವಾಗಿ ವಿನಂತಿಸುತ್ತೇವೆ

ಹಾಗೂ ನಮ್ಮ ಸಂಘದ ಈ ಕೆಳಕಂಡ ಅಂಶಗಳನ್ನು ಪ್ರಸ್ತುತ ನಡೆಯುತ್ತಿರುವ ವರ್ಗಾವಣೆಯಲ್ಲಿ ಪರಿಗಣಿಸಲು ಕೋರುತ್ತೇವೆ

1) ಕಡ್ಡಾಯವ ವರ್ಗಾವಣೆ ಆದವರಿಗೆ ಪ್ರಥಮ ಆದ್ಯತೆ ನೀಡುವ ಬದಲು ಇಲಾಖೆಯ ಕಾರ್ಯಚಟುವಟಿಕೆಯ ಒಂದು ಭಾಗವಾಗಿ ಕೆಲಸ ನಿರ್ವಹಣೆ ಮಾಡುತ್ತಿರುವ ನಿರ್ಧಿಷ್ಟ ಹುದ್ದೆಯ ಶಿಕ್ಷಕರಾದ ಸಿ ಆರ್ ಪಿ/ಬಿ ಆರ್ ಪಿ/ ಈ ಸಿ ಓ/  ಬಿ ಆರ್ ಸಿ ಇವರಿಗೆ ಪ್ರಥಮ ಆದ್ಯತೆಯಲ್ಲಿ ಕೌನ್ಸ್ಲಿಂಗ ನಡೆಸಬೇಕೆಂದು ವಿನಂತಿಸಿಕೊಳ್ಳುತ್ತೇವೆ

2) ವಲಯ ವರ್ಗಾವಣೆ ಎಂದು ಕೇವಲ ನಾಮಾಂಕಿತ‌ ಬದಲಾವಣೆಗೊಂಡು ಅಂಗಿಕಾರವಾದ ಕಡ್ಡಾಯ ವರ್ಗಾವಣೆಯನ್ನು ಈ ವರ್ಷವು ಕೂಡಾ ಕೈಗೊಂಡು ಸುಮಾರು ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿಯೇ ಕೆಲಸ ನಿರ್ವಹಿಸಿದ ಗ್ರಾಮೀಣ ಹಿರಿಯ‌ ಶಿಕ್ಷಕರಿಗೆ ನಗರದ ಪ್ರದೇಶಗಳಿಗೆ ವರ್ಗಾವಣೆ ಆಗಲು ಅವಕಾಶ ಕಲ್ಪಿಸಿ ಅವರ ಅಪಾರ ಅನುಭವದ ಬೋಧನೆ ನಗರದ ಶಾಲೆಯ ಮಕ್ಕಳಿಗೂ ದೊರೆತು ಅಳಿವಿನಂಚಿನಲ್ಲಿರುವ ನಗರ ಪ್ರದೇಶದ ಸರ್ಕಾರಿ ಶಾಲೆಗಳ ಸಭಲೀಕರಣಕ್ಕೆ ಅವಕಾಶ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ

3) 25% ಖಾಲಿ ಇರುವ ತಾಲೂಕುಗಳಿಂದ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸುತ್ತೇವೆ

4) ಹಿಂದಿ(PST) ಶಿಕ್ಷಕರನ್ನು ಸಾಮಾನ್ಯ ಶಿಕ್ಷಕರೆಂದು ಪರಿಗಣಿಸಿ  ಖಾಲಿ ಹುದ್ದೆಗಳನ್ನು ತೋರಿಸಲು ವಿನಂತಿಸುತ್ತೇವೆ

5) ಹಿಂದಿ (PST) ಶಿಕ್ಷಕರಿಗೆ ಸಾಮಾನ್ಯ ಶಿಕ್ಷಕರೊಂದಿಗೆ ಪರಸ್ಪರ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕೆಂದು ವಿನಂತಿಸುತ್ತೇವೆ

6)ಅಂತರ ಜಿಲ್ಲಾ ಪರಸ್ಪರ ವರ್ಗಾವಣೆ ಸೇವಾವಧಿಯಲ್ಲಿ ಒಂದು ಬಾರಿ ಮಾತ್ರ ಎನ್ನುವುದು ಪೂರ್ವಾಗ್ರಹ ಪೀಡಿತ ಕಾನೂನು ಆಗಿದ್ದು ಇದರಿಂದ ಶಾಲೆ ಇಲಾಖೆ ಹಾಗೂ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಆದ್ದರಿಂದ ಇದನ್ನು ಕೈ ಬಿಟ್ಟು ಮುಕ್ತ ಅವಕಾಶ ಮಾಡಿಕೊಡಬೇಕೆಂದು ವಿನಂತಿಸುತ್ತೇವೆ

ನಮ್ಮ ಸಂಘದ ಈ ಮೇಲಿನ ಅಂಶಗಳನ್ನು ಪರಿಗಣಿಸಿ ಶಿಕ್ಷಕ ಸ್ನೇಹಿ ವರ್ಗಾವಣೆ ಮಾಡಿ ‌ಶಿಕ್ಷಕರು ನೆಮ್ಮದಿಯಿಂದ ‌ಬೋಧನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅನುಕೂಲಿಸಬೇಕೆಂದು ತಮ್ಮಲ್ಲಿ ‌ಮತ್ತೊಮ್ಮೆ‌ ವಿನಂತಿಸುತ್ತೇವೆ ‌

ಗೌರವಾನ್ವಿತ ವಂದನೆಗಳೊಂದಿಗೆ


Spread the love

Leave a Reply

Your email address will not be published. Required fields are marked *