Posts Slider

Karnataka Voice

Latest Kannada News

ಶಿಕ್ಷಕರ ಚುನಾವಣೆ: ಹುಬ್ಬಳ್ಳಿ ಗ್ರಾಮೀಣ 100% ಅವಿರೋಧ ಆಯ್ಕೆ

1 min read
Spread the love

ಹುಬ್ಬಳ್ಳಿ: ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಒಡಕಿಗೆ ಕಾರಣವಾಗದ ರೀತಿಯಲ್ಲಿ ಒಂದಾದ ಶಿಕ್ಷಕ ಸಮೂಹದ ಹುಬ್ಬಳ್ಳಿ ಗ್ರಾಮೀಣ ಘಟಕದ ತಾಲೂಕು ಕಾರ್ಯಕಾರಿ ಸಮಿತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾವಿರಾರೂ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತ, ಕೊರೋನಾದ ಜೊತೆ ಹೇಗೆ ಹೋರಾಡಬೇಕೆಂಬ ಕಲ್ಪನೆಯನ್ನ ಜ್ಞಾನದ ಮೂಲಕ ನೀಡುವ ಶಿಕ್ಷಕರು, ಕೊರೋನಾ ಸಮಯದಲ್ಲಿ ಬಂದಿರುವ ಚುನಾವಣೆಯಲ್ಲಿ ಒಂದಾಗಿ, ಶಿಕ್ಷಕರಿಗೂ ತೊಂದರೆಯಾಗದಂತೆ ಹದಿನಾಲ್ಕು ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ.

ಪ್ರಮುಖವಾಗಿ ಐವರು ಮಹಿಳಾ ಶಿಕ್ಷಕರು ಅವಿರೋಧವಾಗಿ ಆಯ್ಕೆಯಾಗಿದ್ದು ಸುಗತಟ್ಟಿ ಶಾಲೆಯ ಎ.ಎ.ಮುನವಳ್ಳಿ, ಉಣಕಲ್ ಸಿದ್ದೇಶ್ವರನಗರದ ಶಾಲೆಯ ಎ.ಎಸ್.ಮುದುಗಲ್, ಗಾಮನಗಟ್ಟಿ ಶಾಲೆಯ ಡಿ.ಎಸ್.ಹಿರೇಮಠ, ಮಂಟೂರ ಶಾಲೆಯ ಪರವೀನಭಾನು ಮನಿಯಾರ ಹಾಗೂ ಗೋಕುಲ ಬಂಜಾರ ಕಾಲೋನಿಯ ಎಸ್.ಜಿ.ದೇಸಾಯಿ ಮಹಿಳಾ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದಾರೆ.

ಇನ್ನುಳಿದಂತೆ ವ್ಹಿ.ಎಫ್.ಚುಳಕಿ, ಡಿ.ಆರ್.ಶೇಷನಗೌಡರ, ಜಿ.ಎಸ್.ಹುಬ್ಬಳ್ಳಿ, ಜಿ.ಎಲ್.ಸತ್ಯಣ್ಣವರ, ಜೆ.ಕೆ.ಉಳ್ಳಟ್ಟಿ, ಎಂ.ಕೆ.ಘೋಡೆಸವಾರ, ಎಂ.ಎಸ್.ಬಂಡಿವಡ್ಡರ, ಎಸ್.ಎಂ.ಮಡಿವಾಳರ, ಎಸ್.ಎಸ್.ಬಳಿಗಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾಮೀಣ ಭಾಗದಲ್ಲಿ ಬಹುತೇಕ ಚುನಾವಣೆಗಳಲ್ಲಿ ಸ್ಪರ್ಧೆಗಳು ಹೆಚ್ಚಾಗುತ್ತಿದ್ದವು. ಇತ್ತೀಚೆಗೆ ಯಾವಾಗಾಲೂ ಅವಿರೋಧ ಆಯ್ಕೆಗಳು ನಡೆದಿರಲಿಲ್ಲ.


Spread the love

Leave a Reply

Your email address will not be published. Required fields are marked *