ಹತ್ತು ಶಿಕ್ಷಕರಿಗೆ ಕೊರೋನಾ ಪಾಸಿಟಿವ್
1 min read
ಗದಗ: ರಾಜ್ಯ ಸರಕಾರ ವಿದ್ಯಾಗಮ ಕಾರ್ಯಕ್ರಮ ಆರಂಭವಾದ ಬೆನ್ನಲ್ಲೇ ಹತ್ತು ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಇರುವುದನ್ನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸಲಿಂಗಪ್ಪ ಮಾಹಿತಿಯನ್ನ ನೀಡಿದ್ದಾರೆ.
ಜಿಲ್ಲೆಯಲ್ಲಿ ಬಹುತೇಕ ಶಿಕ್ಷಕರನ್ನ ಕೊರೋನಾ ಟೆಸ್ಟಗೆ ಒಳಪಡುವಂತೆ ಹೇಳಲಾಗಿತ್ತಾದ್ದರಿಂದ ಬಹುತೇಕರು ಕೋವಿಡ್-19 ಟೆಸ್ಟ್ ಮಾಡಿಸಿಕೊಂಡಿದ್ದರು. ಇದರಲ್ಲಿ 10 ಶಿಕ್ಷಕರಿಗೆ ಕೊರೋನಾ ದೃಢಪಟ್ಟಿದ್ದು, ಅವರೆಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಿಸಿ ಚಿಕಿತ್ಸೆ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಹತ್ತು ಶಿಕ್ಷಕರಿಗೆ ಕೊರೋನಾ ಬಂದಿರುವುದರಿಂದ ಗದಗ ನಗರದ ಮೂರು ಶಾಲೆಗಳು ಹಾಗೂ ಜಿಲ್ಲೆಯ ಎರಡು ಶಾಲೆಗಳನ್ನ ಇಂದು ಕೂಡಾ ತೆರೆದಿಲ್ಲ. ಈ ಮೊದಲೇ ಆ ಶಾಲೆಗಳಿಗೆ ಸಾನಿಟೈಸರ್ ಮಾಡಲಾಗಿತ್ತು. ಈಗ ಮತ್ತೋಮ್ಮೆ ಮಾಡಿ, ಯಾವುದೇ ಸಮಸ್ಯೆಗಳು ಬರದಂತೆ ಕ್ರಮವನ್ನ ಜರುಗಿಸಲಾಗುವುದೆಂದು ಹೇಳಿದರು.
ಶಾಲೆಯನ್ನ ಆರಂಭಿಸುವ ಬಗ್ಗೆ ವೈಧ್ಯರ ಸಲಹೆಯನ್ನ ಪಡೆಯಲು ಅಧಿಕಾರಿಗಳು ಮುಂದಾಗಿದ್ದು, ಸ್ಚಚ್ಚತೆಯನ್ನ ನಿರಂತರವಾಗಿ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನ ಡಿಡಿಪಿಐ ನೀಡಿದರು.