Posts Slider

Karnataka Voice

Latest Kannada News

22ವರ್ಷದಲ್ಲಿ ಅಪರೂಪದ ಶಿಷ್ಯನನ್ನ ಕಂಡ ಶಿಕ್ಷಕಿ- ಹೋಂ ವರ್ಕಗಾಗಿ ವಿದ್ಯಾರ್ಥಿ ಎಷ್ಟು ದೂರದಿಂದ ಬಂದ ಗೊತ್ತಾ…!

1 min read
Spread the love

ಹುಬ್ಬಳ್ಳಿ: ಇಂತಹದೊಂದು ಅಪರೂಪದ ಪ್ರಕರಣವನ್ನು ಬಹುತೇಕ ಯಾವ ಶಿಕ್ಷಕರು ಅನುಭವಿಸಿರಲು ಸಾಧ್ಯವೇಯಿಲ್ಲ. ಅಂತಹದೊಂದು ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದ್ದು, ಶಿಕ್ಷಕ ವೃತ್ತಿಯ ಅಮೋಘವಾದ ಕ್ಷಣವನ್ನ ಸವಿಯುವಂತಾಗಿದೆ. ನಿಮಗೆ ಈ ವರದಿಯಲ್ಲಿ ಕಾಣುವುದು ಒಂದೀಡಿ ಬಡತನ.. ಅಕ್ಷರ ಪ್ರೀತಿ ಮತ್ತೂ ಶಿಕ್ಷಕಿಯ ಮಕ್ಕಳ ಪ್ರೇಮ..

ಅಪರೂಪದ ವೀಡಿಯೋ ಇಲ್ಲಿದೆ ನೋಡಿ

ಹೌದು.. ಇದು ಹುಬ್ಬಳ್ಳಿಯ ಸಾಯಿನಗರದಲ್ಲಿ ನಡೆದ ಘಟನೆ. ಕಲ್ಲಪ್ಪ ನಾಗಪ್ಪ ಕೊಕಾಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಶಿಕ್ಷಕಿ ಸವಿತಾ ಅಶೋಕ ಸಜ್ಜನರ ಹಿರಿಮೆ. ಶಿಕ್ಷಕಿ ಸವಿತಾ ಅವರು ಮಕ್ಕಳಲ್ಲಿಟ್ಟಿರುವ ವಿಶ್ವಾಸವನ್ನ ಇಮ್ಮಡಿ ಮಾಡಿದ್ದು, ಪವನ ಎಂಬ ವಿದ್ಯಾರ್ಥಿ.

ಪವನನ ಬದುಕು ಕತ್ತಲಿನಿಂದ ಹೊರಗೆ ಬರಬೇಕಾದ ಜೀವನ. ಆತನ ತಂದೆ ಮೂಖ, ತಾಯಿ ವಿಕಲಚೇತನೆ. ಅಷ್ಟೊಂದು ಸರಿಯಾಗಿ ನಡೆಯಲು ಬಾರದು. ಅಂತಹದರಲ್ಲಿ ಪವನಗೆ ಮಾಡಿದ ಹೋಂ ವರ್ಕ್ ಟೀಚರಗೆ ತೋರಿಸಬೇಕು ಮತ್ತೂ ಹೊಸ ಹೋಂ ವರ್ಕ್ ಹಾಕಿಸಿಕೊಳ್ಳಬೇಕೆಂದು ಕುಂದಗೋಳ ತಾಲೂಕಿನ ಯರೆಬೂದಿಹಾಳ ಗ್ರಾಮದಿಂದ ಹುಬ್ಬಳ್ಳಿಯ ಸಾಯಿನಗರಕ್ಕೆ ತಾಯಿಯನ್ನ ಕರೆದುಕೊಂಡು ಬಂದಿದ್ದಾನೆ.

ಮನೆಯಿಂದಲೇ ಟೀಚರಗೆ ಕೇಳಿ ಹೋಂ ವರ್ಕ್ ಹಾಕಿಸಿಕೊಳ್ಳಬೇಕೆಂದರೇ, ಮೊಬೈಲ್ ಇಲ್ಲ. ಹೀಗಾಗಿ ಪವನ ಹಠಕ್ಕೆ ಬಿದ್ದು, ತಾಯಿಯನ್ನ ತನ್ನ ಪ್ರೀತಿಯ ಶಿಕ್ಷಕಿಯ ಬಳಿ ಕರೆದುಕೊಂಡು ಬಂದು ಹೋಗಿದ್ದಾನೆ.

ಉಣಕಲ್ ನಲ್ಲೇ ಇರುವ ವಸತಿ ನಿಲಯದಲ್ಲೇ ಇರುವ ಪವನ, ಲಾಕ್ ಡೌನ್ ಸಂಬಂಧ ಮನೆಗೆ ಕಳಿಸಲಾಗಿದೆ. ಹಾಗಾಗಿಯೇ, ಪವನಗೆ ಅಕ್ಷರ ಕಲಿಯುವ ದಾಹ ಹೆಚ್ಚಾಗಿದೆ. ಇಂತಹ ಅಪರೂಪದ ಘಟನೆಗೆ ಶಿಕ್ಷಕಿ ಸವಿತಾ ಸಜ್ಜನ, ಮಾತು ಬಾರದೇ ಕಣ್ಣೀರಾಗಿದ್ದಾರೆ. ಯಾವುದೇ ವಿದ್ಯಾರ್ಥಿಗೆ ಬಡತನ ಕಾಡಬಾರದು. ಇಂತಹ ಶಿಷ್ಯನನ್ನ ಪಡೆದ ನನಗೆ ಹೆಮ್ಮೆ ಆಗುತ್ತಿದೆ ಎನ್ನುತ್ತಲೇ, ಪವನನ್ನನ್ನ ನೆನೆದು ಕಣ್ಣೀರುರಾಗುತ್ತಾರೆ.

ಮೂಖ ತಂದೆ-ವಿಕಲಚೇತನ ತಾಯಿಯ ನಡುವೆ ಅಕ್ಷರದಲ್ಲೇ ಜೀವನ ಕಟ್ಟಿಕೊಳ್ಳುವ ಕನಸು ಕಂಡಿರುವ ಪವನನಿಗೆ ಒಂದಿಷ್ಟು ಸಹಾಯದ ಅವಶ್ಯಕತೆಯಿದೆ. ಅದನ್ನ ಯಾರೇ ಮಾಡಿದರೂ, ತಾವೂ ವಿದ್ಯೆಗೆ ಸಹಾಯ ಮಾಡಿದಂತಾಗುತ್ತದೆಯಲ್ಲವೇ.. ನೋಡಿ.. ಸಹಾಯ ಮಾಡುವ ಮನಸ್ಸಿದ್ದರೇ 8105664678 ಕಾಲ್ ಮಾಡಿ..


Spread the love

Leave a Reply

Your email address will not be published. Required fields are marked *