Posts Slider

Karnataka Voice

Latest Kannada News

ಸರ್ಕಾರಿ ಶಿಕ್ಷಕರು ರಾಜ್ಯ ಸಂಘದ ನಿಯಮದ ಕಪಿ ಮುಷ್ಟಿಯಲ್ಲಿ: ಬದಲಾಗಬೇಕಿದೆ ಬೈಲಾ..!

1 min read
Spread the love

ಧಾರವಾಡ: ಪ್ರಜಾಪ್ರಭುತ್ವ ದೇಶ ನಮ್ಮದಾಗಿದ್ದು, ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಿಕ್ಷಕರು ರಚಿಸಿಕೊಂಡಿರುವ ಸರ್ಕಾರದಿಂದ ಮಾನ್ಯತೆ ಹೊಂದಿರುವ “ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ” ದ ಪದಾಧಿಕಾರಿಗಳನ್ನು,ಸದಸ್ಯತ್ವ ಹೊಂದಿದ ಎಲ್ಲಾ ಶಿಕ್ಷಕರುಗಳು ಐದು ವರ್ಷದ ಅವಧಿಗೆ ಮತ ಚಲಾಯಿಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.

ಆಯ್ಕೆಗೊಂಡ ಪದಾಧಿಕಾರಿಗಳು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ರಚಿಸಿಕೊಂಡು ಸಂಘಟನ ಗುರಿ ಉದ್ದೇಶಗಳನುಸಾರ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಶಿಕ್ಷಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿರುತ್ತದೆ.

ಅಂತಹ ಶಿಕ್ಷಕರ ಹಿತ ಕಾಪಾಡಬೇಕಾದ ರಾಜ್ಯ ಕಾರ್ಯಕಾರಿಣಿ ಸಮಿತಿಯು ಇಂದು ಶಿಕ್ಷಕ ವಲಯದಲ್ಲಿ ಉದ್ಬವಿಸಿರುವ ಕಲ್ಯಾಣ ಕರ್ನಾಟಕ ವರ್ಗಾವಣಾ ಸಮಸ್ಯೆ, ಅಂತರ್ ಜಿಲ್ಲಾ ವರ್ಗಾವಣಾ ಮಿತಿ ,ನೇಮಕಾತಿ ನಿಯಮ, ಬಡ್ತಿ, ವೇತನ ಶ್ರೇಣಿ ತಾರತಮ್ಯ ಹಾಗೂ ಸಿ ಅಂಡ್ ಆರ್ ನಿಯಮಗಳು ಹಾಗೂ ಹೊಸ ಪಿಂಚಣಿ ನೀತಿಗಳನ್ನು ಸರಿಪಡಿಸುವಲ್ಲಿ ವಿಫಲವಾಗಿದೆ.

ಇಂತಹ ಸ್ಥಿತಿಯಲ್ಲಿ ಶಿಕ್ಷಕರು ರಾಜ್ಯ ಸಂಘಟನ ನಾಯಕರ ವಿರುದ್ದ ದನಿ ಎತ್ತುವ ಪರಿಸ್ಥಿತಿಯಲ್ಲಿಯೂ ಸಹಿಸಿಕೊಳ್ಳುವ ಮನೋಭಾವ ಮೂಡಿಸಿಕೊಳ್ಳಬೇಕಾದ ಅನಿವಾರ್ಯ ಬಂದಿದೆ. ಇದಕ್ಕೆ ಕಾರಣವೇನು ಗೊತ್ತೆ..

ರಾಜ್ಯ ಸಂಘವು ತಮ್ಮ ಬೈಲಾ ನಿಯಮದಲ್ಲಿ ಅಂತಹ  ಶಿಕ್ಷಕರ ವಿರುದ್ದ ಸಂಘಟನ ಬಾಧಕ ರೀತಿಯಲ್ಲಿ ವರ್ತಿಸುವ ಕಾರಣ ನೀಡಿ ಸದಸ್ಯತ್ವವನ್ನೇ ರದ್ದು ಮಾಡುವಂತ ನಿಯಮ ಸೇರಿಸಿಕೊಂಡಿರುವುದು. ತಮಗಿಚ್ಚೆಯಂತೆ ಬೈಲಾ ತಿದ್ದುವ ಅಧಿಕಾರವನ್ನು ಹೊಂದಿರುವುದು. ಶಿಕ್ಷಕರ ಮತದಾರರ ಪಟ್ಟಿಯಿಂದ ಶಿಕ್ಷಕರ ಹೆಸರುಗಳನ್ನು ತೆಗೆಯುವುದು. ವಾರ್ಷಿಕ ವಂತಿಕೆ ನೀಡದ ಶಿಕ್ಷಕರುಗಳ ಸದಸ್ಯತ್ವ ತಾನಾಗಿಯೇ ರದ್ದಾಗುವುದು. ಇಂತಹ  ಪ್ರಜಾಪ್ರಭುತ್ವ ವಿರುದ್ದದ ಅಸಹಿಷ್ಣುತ ನಿಯಮಗಳು ರಾಜ್ಯದ ಹಲವು ಶಿಕ್ಷಕರುಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇಂದು ಶಿಕ್ಷಕರ ಮತವೂ ಶಿಕ್ಷಕರಿಗೇ ಮುಳುವಾಗಿ ಪರಿಣಮಿಸಿದೆ. ಮತ ನೀಡಿ ಗೆಲ್ಲಿಸಿದ ಶಿಕ್ಷಕರುಗಳನ್ನೇ ಇಂತಹ ನಿಯಮಗಳು ಕಪಿಮುಷ್ಟಿಯಲ್ಲಿ ಬಂಧಿಸಿಕೊಂಡಿವೆ. ಇಂದು ಶಿಕ್ಷಕರ ಚುನಾವಣೆ ಕಾವೇರಿದೆ. ರಾಜ್ಯ ಕಾರ್ಯಕಾರಿಣಿ ಪದಾಧಿಕಾರಿಗಳು ಮುಂದಿನ ಅವಧಿಗೂ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಇಂತಹ ಅನ್ಯಾಯದ ಮಾರ್ಗ ಹಿಡಿದಿದ್ದಾರೆ. ಚುನಾವಣೆಯಲ್ಲಿ ತಮ್ಮ ವಿರುದ್ದ ಸ್ಪರ್ದಿಸಲು ಯತ್ನಿಸುವ ಶಿಕ್ಷಕರುಗಳ ವಿರುದ್ದ, ಸಂಘಟನೆ ಬಾಧಕ ರೀತಿಯಲ್ಲಿ ವರ್ತಿಸಿದ ಕಾರಣ ನೀಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದು ಹಾಕಿಸಿ, ತಮಗೆ ಎದುರಾಗಿ ಸ್ಪರ್ಧಿಸುವವರ ಅವಕಾಶ ತಪ್ಪಿಸಿ  ಅವಿರೋಧ ಆಯ್ಕೆಗೊಂಡು ಅಕ್ರಮವಾಗಿ ಜಯಸಾಧಿಸಿ ಬೀಗುವ ಪ್ರತಿನಿಧಿಗಳ ಬಣ್ಣ ಇಂದು ಬಯಲಾಗಬೇಕಿದೆ. ರಾಜ್ಯದ ಶಿಕ್ಷಕರುಗಳಿಗೆ ಸಂಘದ ಬೈಲಾ ಪ್ರತಿಯನ್ನು ಸಂಪೂರ್ಣವಾಗಿ ಓದಿ ತಿಳಿಸುವ ಅನಿವಾರ್ಯ ಇಂದು ಬಂದಿದೆ. ಶಿಕ್ಷಕರ ಮತದಾನ ಶಿಕ್ಷಕರನ್ನೇ ಕಟ್ಟಿ ಹಾಕುತ್ತಿದೆ.

ರಾಜ್ಯದ ಸಮಸ್ತ ಶಿಕ್ಷಕ ವೃಂದ ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಇಂತಹ ಬೈಲಾದ ಅಂಶಗಳು ತಿದ್ದುಪಡಿಯಾಗಬೇಕಾಗಿದೆ. ಹಲವಾರು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ತಾವೇ ಕಂಡುಕೊಳ್ಳಬೇಕಾಗಿದೆ. ಅಂತಹ ಸ್ವಾರ್ಥ ನಾಯಕರ ಭವಿಷ್ಯ ಬರೆಯುವ ಅವಕಾಶ ಇಂದು ಬಂದೊದಗಿದೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ ಅಭಿಪ್ರಾಯಪಟ್ಟಿದ್ದಾರೆ.


Spread the love

Leave a Reply

Your email address will not be published. Required fields are marked *