Posts Slider

Karnataka Voice

Latest Kannada News

ಸುತಗಟ್ಟಿ ಸರಕಾರಿ ಶಾಲೆ ಶಿಕ್ಷಕಿ ಆಶಾ ಮುನವಳ್ಳಿಯವರಿಗೆ ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನ

1 min read
Spread the love

ಧಾರವಾಡ: ಸರಕಾರಿ ಶಾಲೆಗಳಲ್ಲಿ ಹೊಸತನ ಮೂಡಿಸುವ ಜೊತೆಗೆ ಮಕ್ಕಳಲ್ಲಿ ವಿನೂತನವಾದ ಚಟುವಟಿಕೆ ಮಾಡಿಸುವಲ್ಲಿ ನಿರಂತರವಾಗಿ ಮಗ್ನರಾಗಿರುವ ಹುಬ್ಬಳ್ಳಿ ತಾಲೂಕಿನ ಸುತಗಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ, ಹುಬ್ಬಳ್ಳಿ ತಾಲೂಕು ಘಟಕ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ ಹಿರಿಯ ಶಿಕ್ಷಕ ಸಮಾಜ ಸೇವಕಿ ಲೂಸಿ ಸಾಲ್ಡಾನ್ ಅವರ ದತ್ತಿ ದಾನದ ಅಡಿಯಲ್ಲಿ ಈ ಪ್ರಶಸ್ತಿಯನ್ನ ನೀಡಲಾಯಿತು.

ಧಾರವಾಡ ಶಿಕ್ಷಕರ ಭವನದಲ್ಲಿ ನಡೆದ ಸಮಾರಂಭದಲ್ಲಿ  ಧಾರವಾಡ ಡಿಡಿಪಿಐ ಮೋಹನಕುಮಾರ ಹಂಚಾಟೆ, ಧಾರವಾಡ ಜಿಲ್ಲಾ DYPC ಪ್ರಮೋದ ಮಹಾಲೆ, ಕ್ಷೇತ್ರ ಸಮನ್ವಯ ಅಧಿಕಾರಿ ಎನ್,ಎಸ್. ಧಪೇದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಸೇರಿದಂತೆ ಹಲವರು ಉಪಸ್ಥಿತರಿದ್ದು, ಪ್ರಶಸ್ತಿಯನ್ನ ಪ್ರಧಾನ ಮಾಡಿದ್ರು.

ಸರಕಾರಿ ಶಾಲೆಯನ್ನ ಸಾಧ್ಯವಾದಷ್ಟು ಬೆಳೆಸುವ ಉದ್ದೇಶದಿಂದ ಸ್ವಂತ ಖರ್ಚಿನಿಂದ ಶಾಲೆಗೆ ವಿನೂತನವಾಗಿ ಬಣ್ಣ ಮಾಡಿಸಿ, ಮಕ್ಕಳಲ್ಲಿ ಕಲಿಕೆಯ ಜೊತೆಗೆ ಆಟೋಟವನ್ನ ಮಾಡಿಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಆಶಾಬೇಗಂ ಮುನವಳ್ಳಿ ಯಶಸ್ವಿಯಾಗಿರುವುದನ್ನ ಇಲ್ಲಿ ಸ್ಮರಿಸಬಹುದು. ಸುತಗಟ್ಟಿ ಶಾಲೆಯ ಮಕ್ಕಳು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡುವಲ್ಲಿ ಶಿಕ್ಷಕಿ ಮುನವಳ್ಳಿಯವರ ಪಾತ್ರ ಮಹತ್ವದ್ದಾಗಿದೆ.


Spread the love

Leave a Reply

Your email address will not be published. Required fields are marked *