ಮೋಡಾ ಮುಸುಕಿದ ಬಾನು.. ರೆಕ್ಕೆ ತಿರುಗದ ಪ್ಯಾನು.. ಪ್ರವೀಣಾ.. ದಡ್ಡ.. ದಡ್ಡಾ.. ದಡ್ಡಾ..!
1 min read
ಧಾರವಾಡ: ಪ್ರಮುಖರೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಮನೆಯಲ್ಲಿಯೂ ಸ್ಥಿತಿವಂತರೂ ಆಗಿರುವ ಕುಟುಂಬವೊಂದರ ಯುವಕ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ಕಮಲಾಪುರದಲ್ಲಿ ನಡೆದಿದೆ.
ಕಮಲಾಪುರ ನಿವಾಸಿಯಾಗಿರುವ ಪ್ರವೀಣ ದುಬೆ ಎಂಬಾತನೇ ನೇಣಿಗೆ ಕೊರಳೊಡ್ಡಿದ್ದು, ಈತ ತನ್ನನ್ನ ತಾನೇ ಸಾಯಿಸಿಕೊಳ್ಳಲು ಕಾರಣವಾಗಿದ್ದು ಏನು ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ.
ತನ್ನ ಮನೆಯ ಹೊರಭಾಗದಲ್ಲಿ ಮಲಗುತ್ತಿದ್ದ ಪ್ರವೀಣ, ನಿನ್ನೆ ಮನೆಯೊಳಗೆ ಮಲಗುತ್ತಿದ್ದಾಗ ತಾಯಿ, ಏಕೆ ಒಳಗಡೆ ಮಲಗುತ್ತಿದ್ದೀಯಾ ಎಂದಾಗ, ಸುಮ್ಮನೆ ಎಂದು ಒಳಗೆ ಹೋಗಿದ್ದಾನೆ. ಅಷ್ಟೇ ಅಲ್ಲ, ಮದ್ಯದ ಬಾಟಲಿಯೂ ಆತ್ಮಹತ್ಯೆಯ ಸ್ಥಳದಲ್ಲಿ ಸಿಕ್ಕಿದೆ. ತನ್ನ ತಂಗಿಯ ಮದುವೆ ಮಾಡಿದ್ದ ಪ್ರವೀಣ, ಆಕೆಗೂ ‘ಸ್ವಾರಿ’ ಎಂದು ಮೆಸೇಜ್ ಕಳಿಸಿದ್ದಾನಂತೆ.
ಪ್ರವೀಣ ಕಳೆದ ವರ್ಷ ಹೊಲವನ್ನ ಮಾರಾಟ ಮಾಡಿ, ಮನೆಯನ್ನ ರಿಪೇರಿ ಮಾಡಿಕೊಂಡು ತಂಗಿಯ ಮದುವೆ ಮಾಡಿಕೊಟ್ಟು, ತನಗೂ ಹೆಣ್ಣನ್ನ ಫಿಕ್ಸ್ ಮಾಡಿಕೊಂಡಿದ್ದನಂತೆ. ಕೊರೋನಾ ಸಮಯದಲ್ಲಿ ಯಾರೋ ಸುಮ್ಮನೆ ‘ನಿಂಗೆ ಕೊರೋನಾ ಬಂದಿದೆ’ ಎಂದು ನಗೆಚಟಾಕಿ ಹಾರಿಸಿದ್ದರಿಂದ ಎರಡು ದಿನ ಅಳುತ್ತಲೇ ತಿರುಗಾಡಿದ್ದನಂತೆ. ಹೀಗಾಗಿ, ಪ್ರವೀಣ ಮಾನಸಿಕವಾಗಿಯೂ ಚೂರು ಕುಗ್ಗಿದ್ದನಂತೆ ಎಂದು ಹೇಳಲಾಗಿದೆ.
ಧಾರವಾಡದ ಉಪನಗರ ಠಾಣೆಯಲ್ಲಿ ಆತ್ಮಹತ್ಯೆ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.