ಮಲಗೆದ್ದು ನೋಡುವುದರಲ್ಲಿ ‘ಪರ್ಮೆನೆಂಟ್’ ಎದ್ದೇಳದ ಮಂಜುನಾಥ…!
1 min read
ಧಾರವಾಡ: ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ನೂತನ ವರ್ಷದ ಸಮಯದಲ್ಲಿ ಅಲೆದಾಡಿ ಬಂದು ಮನೆ ಸೇರಿದ್ದ ಯುವಕನೋರ್ವ ಮನೆಯ ಹಿತ್ತಲಿನಲ್ಲಿನ ಹುಣಸೆ ಮರದಲ್ಲಿ ನೇಣಿಗೆ ಶರಣಾದ ಘಟನೆ ಸಂಭವಿಸಿದೆ.
28 ವರ್ಷದ ಯುವಕ ಮಂಜುನಾಥ ಪರಸಪ್ಪ ಉಣಕಲ್ ಎಂಬಾತನೇ ರಾತ್ರಿಯವರೆಗೆ ನೂತನ ವರ್ಷದ ಸಡಗರದಲ್ಲಿ ಭಾಗಿಯಾಗಿದ್ದ. ಗೆಳೆಯರೊಂದಿಗೆ ಹೊರಗಡೆಯಿಂದ ಮನೆಗೆ ಬಂದು ಮಲಗಿದ್ದ. ಇನ್ನುಳಿದವರೆಲ್ಲರೂ ಮನೆಯಲ್ಲಿ ಮಲಗಿದ ನಂತರ, ಮಂಜುನಾಥ ಹಿತ್ತಲಿನಲ್ಲಿನ ಹುಣಸೆಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಮೃತನ ತಂದೆ ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಮಂಜುನಾಥ ಮದ್ಯವ್ಯಸನಿಯಾಗಿದ್ದ. ಸದಾಕಾಲ ಕುಡಿದ ನಸೆಯಲ್ಲಿಯೇ ಇರುತ್ತಿದ್ದ. ಆಗಾಗ, ನಸೆಯಲ್ಲಿದ್ದು ನಾನು ಸಾಯುತ್ತೇನೆ ಎಂದು ಹೇಳುತ್ತಿದ್ದ. ಹೀಗಾಗಿ, ಆತನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಿದ್ದಾರೆ.
ಹೊಸ ವರ್ಷದ ಸಡಗರದ ನಸೆಯನ್ನ ಮಂಜುನಾಥನನ್ನ ಇನ್ನಿಲ್ಲವಾಗಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಅಣ್ಣಿಗೇರಿ ಠಾಣೆಯ ಪೊಲೀಸರು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.