ಆತನಿಗಾಗಿ ಪ್ರಾಣ ಬಿಟ್ಟ ಆಕೆ: ಮಾನವಂತರ ಮನೆಯಲ್ಲಿ 19+24 ಹೀಗಾಗಬಾರದಿತ್ತು…!
1 min read
ಹುಬ್ಬಳ್ಳಿ: ಕೇಶ್ವಾಪುರದ ಕಾರ್ ವಾಸಿಂಗ್ ಮಾಲೀಕನ ಕಾರು ತೆಗೆದುಕೊಂಡು ಹೋಗಿ ಪ್ರಾಣ ಕಳೆದುಕೊಂಡ ನಾಲ್ವರನ್ನ ಮರೆಯಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನಡೆದಿದೆ.
ಹುಬ್ಬಳ್ಳಿಯ ಕೇಶ್ವಾಪುರ ಪಾರಸವಾಡಿ ನಿವಾಸಿಯಾದ 19 ವಯಸ್ಸಿನ ನೇಹಾ ಪಾಟೀಲ್ ಎಂಬ ಯುವತಿಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಕಳೆದ ಒಂದು ತಿಂಗಳ ಹಿಂದೆ ಸಿದ್ದಾಪುರ ಬಳಿ ಹುಬ್ಬಳ್ಳಿಯ ಮೂಲದ ನಾಲ್ಕು ಜನರು ಕಾರಿನ ಸಮೇತ ಹಳ್ಳದಲ್ಲಿ ಮುಳುಗಿ ಸಾವನಪ್ಪಿದ್ದರು, ಹೀಗಾಗಿ ಅವರ ಜೊತೆ ತುಂಬಾ ಒಡನಾಟವನ್ನು ಹೊಂದಿದ್ದ ನೇಹಾ ಪಾಟೀಲ್, ನಿನ್ನೇ ರಾತ್ರಿ ತನ್ನ ಮನೆಯಲ್ಲಿಯೇ ಇಂಗ್ಲಿಷ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆಗೆ ಸಂಬಂದಿಸಿದ ಹಾಗೇ ಹುಬ್ಬಳ್ಳಿಯ ಕೇಶ್ವಾಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಹಾ ಪಾಟೀಲ, ಸಿದ್ಧಾಪುರದ ಬಳಿ ನಡೆದ ಘಟನೆಯಂದಿನಿಂದ ನೆಮ್ಮದಿಯನ್ನ ಕಳೆದುಕೊಂಡಿದ್ದಳು. ತನ್ನೊಂದಿಗೆ ಯಾರೂ ಇಲ್ಲವೆಂದು ಒಬ್ಬಳೇ ಇರೋ ಪ್ರಯತ್ನ ಮಾಡುತ್ತಿದ್ದಳು. ಹೀಗಾಗಿಯೇ ಇಂತಹ ಕೆಟ್ಟ ನಿರ್ಧಾರ ತೆಗೆದುಕೊಂಡು ಜೀವ ಕಳೆದುಕೊಂಡಿದ್ದಾಳೆ.