ಲೇಟ್ ಫೀ- ಕರ್ನಾಟಕವಾಯ್ಸ್.ಕಾಂ ವರದಿಗೆ ಡಿಸಿಎಂ ಸ್ಪಂಧನೆ
1 min read
ಧಾರವಾಡ: ಪದವಿ ಕಾಲೇಜುಗಳಲ್ಲಿ ಲೇಟ್ ಫೀ ಹೆಸರಿನಲ್ಲಿ ಹಣ ಪಡೆಯಲಾಗುತ್ತಿದೆ ಎಂಬ ವರದಿಗೆ ಸ್ಪಂಧಿಸಿರುವ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸ್ಪಂಧನೆ ನೀಡಿದ್ದು, ಈ ಬಗ್ಗೆ ಸಾಧ್ಯವಾದಷ್ಟು ಬೇಗನೇ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ಧಾರವಾಡದಲ್ಲಿಂದು ಈ ವಿಷಯದ ಬಗ್ಗೆ ಮಾತನಾಡಿದ ಡಿಸಿಎಂ, ಪದವಿ ವಿದ್ಯಾರ್ಥಿಗಳಿಗೆ ಲೇಟ್ ಫೀ ಎಂದು ಹಣ ಪಡೆಯುತ್ತಿರುವುದನ್ನ ಗಮನಿಸಿ, ಈ ಬಗ್ಗೆ ಬೇಗನೇ ನಿಖರವಾದ ನಿರ್ಧಾರವನ್ನ ತೆಗೆದುಕೊಳ್ಳುತ್ತೇನೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.
ವಿಶ್ವವಿದ್ಯಾಲಯಗಳಲ್ಲಿ ಬಿಎ, ಬಿಕಾಂ ಮತ್ತು ಬಿಸ್ಸಿ ಪ್ರವೇಶಗಳಿಗೆ ಲೇಟ್ ಫೀ ಹೆಸರಿನಲ್ಲಿ 4240 ರೂಪಾಯಿಗಳನ್ನ ಪಡೆಯಲಾಗುತ್ತಿತ್ತು. ಈ ಬಗ್ಗೆ ಕರ್ನಾಟಕವಾಯ್ಸ್.ಕಾಂ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಈ ಪ್ರಯತ್ನ ಸಫಲವಾಗಿದ್ದು, ಬಹುತೇಕ ಎರಡು ದಿನದಲ್ಲಿ ಇದಕ್ಕೊಂದು ಸ್ಪಷ್ಟಣೆಯನ್ನ ಸಚಿವರು ನೀಡಲಿದ್ದಾರೆ.
ಕೊರೋನಾ ಸಮಯದಲ್ಲಿ ಲೇಟ್ ಫೀ ಹೆಸರಿನಲ್ಲಿ ಹಣ ಪಡೆಯುತ್ತಿರುವುದು ಹಲವು ಬಡ ಕುಟುಂಬಗಳಿಗೆ ತೊಂದರೆಯಾಗುತ್ತದೆ ಎಂಬ ಅಂಶವನ್ನೂ ಕರ್ನಾಟಕವಾಯ್ಸ್.ಕಾಂ ಸಚಿವರಿಗೆ ತಿಳಿಸುವ ಪ್ರಯತ್ನವನ್ನ ಮಾಡಿತ್ತು.